







ನೆಲ್ಯಾಡಿ: ಪುಚ್ಚೇರಿ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸರಕಾರದ ರಚನೆಗಾಗಿ ಆಧುನಿಕ ತಂತ್ರಜ್ಞಾನ ಬಳಸಿ ಮೊಬೈಲ್ ಆ್ಯಪ್ ಮೂಲಕ ಚುನಾವಣೆ ಯಶಸ್ವಿಯಾಗಿ ನಡೆಸಲಾಯಿತು.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತಂತ್ರಜ್ಞಾನ ಬಳಕೆ, ಪಾರದರ್ಶಕ ಮತದಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಚುನಾವಣೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಚುನಾವಣೆಯಲ್ಲಿ ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಸಾಕ್ಷಿ ಕೆ. ಹಾಗೂ ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಸನ್ನಿಧಿ ಎಸ್.ಪಿ. ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ ಗಣ್ಯಶ್ರೀ ಹಾಗೂ ಜೋಸ್ಟನ್ ಡಿಸೋಜ ಆಯ್ಕೆಯಾಗಿದ್ದು,
ಇದೇ ವೇಳೆ ವಿವಿಧ ಖಾತೆಗಳಿಗೆ ಸಚಿವರನ್ನು ಆಯ್ಕೆ ಮಾಡಲಾಯಿತು. ವಿದ್ಯಾ ಮತ್ತು ಗ್ರಂಥಾಲಯ ಮಂತ್ರಿಯಾಗಿ ಪ್ರಣತಿ ಎ., ಸಾಂಸ್ಕೃತಿಕ ಮಂತ್ರಿಯಾಗಿ ನವ್ಯಶ್ರೀ, ಕ್ರೀಡಾ ಮಂತ್ರಿಯಾಗಿ ಶ್ರೇಯಸ್, ಆರೋಗ್ಯ ಮಂತ್ರಿಯಾಗಿ ಸಾನ್ವಿ ಪಿ.ಆರ್., ಸಮಯ ಪಾಲನಾ ಮಂತ್ರಿಯಾಗಿ ಪ್ರತ್ಯುಷ್ ಎಂ.ಆರ್., ವಾರ್ತಾ ಮತ್ತು ಪ್ರಚಾರ ಮಂತ್ರಿಯಾಗಿ ಪ್ರಣತಿ ಎ., ಸ್ವಚ್ಛತಾ ಮಂತ್ರಿಯಾಗಿ ಶ್ರೇಯಸ್, ಸಂಪರ್ಕ ಖಾತೆ ಮಂತ್ರಿಯಾಗಿ ಸುಧಿ ಹಾಗೂ ರಕ್ಷಣಾ ಮಂತ್ರಿಯಾಗಿ ರೋಕ್ಷಿತ್ ಗೌಡ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ಗಣ್ಯಶ್ರೀ ಜವಾಬ್ದಾರಿ ವಹಿಸಿಕೊಂಡರು.
ಶಾಲಾ ಮುಖ್ಯಶಿಕ್ಷಕಿ ಗಿರಿಜಾ ಪಿ. ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರಾದ ಪುರಂದರ ಗೌಡ ಡಿ., ಜಾಹ್ನವಿ ಐ., ಯೋಗೀಶ್, ದಿನೇಶ್ ಕೆ.ಎಸ್. ಹಾಗೂ ರೋಹಿಣಿ ಸಹಕರಿಸಿದರು.



