ನೇಸರ ಮಾ.25: ಕಳೆದ 12 ವರ್ಷಗಳಿಂದ ಮಳೆನೀರು ಕೊಯ್ಲು ಮತ್ತು ಸರಳ ಜಲಸಂರಕ್ಷಣಾ ವಿಧಾನಗಳನ್ನು ಅಳವಡಿಸುವ ಮೂಲಕ ಅಂತರ್ಜಲವೃದ್ಧಿ, ಪರಿಸರವನ್ನು ಉಳಿಸುವ ಕಾರ್ಯವನ್ನು ಕೈಗೊಂಡ ಕೊಕ್ಕಡದ ಪ್ರಗತಿಪರ ಕೃಷಿಕ ಡೇವಿಡ್ ಜೈಮಿ
ಇವರು ಫಿಲ್ಟರನ್ನು ಶೋಧಿಸಿ ಮನೆಯ ಛಾವಣಿಯ ಮೇಲೆ ಬಿದ್ದ ನೀರನ್ನು ಬಾವಿಗೆ ಇಂಗಿಸುವ ಮೂಲಕ ಆ ನೀರನ್ನು ಮನೆ ಬಳಕೆಗೆ, ಇತರ ನೀರಿನ ಸಮಸ್ಯೆಗಳ ನಿವಾರಣೆಗೆ ಹಾಗೂ ಅಂತರ್ಜಲ ವೃದ್ಧಿಸುವ ಕಾರ್ಯಗಳ ಕುರಿತಾಗಿ ಊರಿನ ಜನರಿಗೆ, ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಮಾಹಿತಿ ನೀಡಿ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ. ತಮ್ಮ ಕೃಷಿ ಭೂಮಿಯಲ್ಲಿ ಅತೀ ಸರಳ ಹಾಗೂ ಕಡಿಮೆ ಖರ್ಚಿನಲ್ಲಿ ಅತೀ ಹೆಚ್ಚು ಜಲಸಂರಕ್ಷಣಾ ವಿಧಾನಗಳನ್ನು ಅಳವಡಿಸುವ ಮುಖಾಂತರ ಜನರಲ್ಲಿ ಆಸಕ್ತಿ ಮೂಡಿಸಿ ಪ್ರೇರಣೆ ನೀಡಿದ ಇವರ ಸಾಧನೆಯನ್ನು ಗುರುತಿಸಿ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಗೆ ಆಯ್ಕೆಯಾಗಿರುತ್ತಾರೆ.