










ಶಿಶಿಲ: ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರೆಗುಡ್ಡೆ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಯ ಬದಿ ಕುಸಿದು ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಶಿಶಿಲ–ಅರಸಿನಮಕ್ಕಿ ಘಟಕ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಕಾರ್ಯ.
ರಸ್ತೆಯ ಬದಿಯಲ್ಲಿ ಉಂಟಾಗಿದ್ದ ಕುಸಿತದಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸ್ಥಳೀಯರ ಮನವಿಗೆ ಸ್ಪಂದಿಸಿದ ಶೌರ್ಯ ತಂಡ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶ್ರಮದಾನದ ಮೂಲಕ ರಸ್ತೆ ಬದಿಯನ್ನು ಭದ್ರಪಡಿಸಿ ಸಂಚಾರಕ್ಕೆ ಅನುಕೂಲವಾಗುವಂತೆ ದುರಸ್ಥಿ ಕಾರ್ಯ ನಡೆಸಿದರು.
ಈ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಶ್ರಮದಾನ ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಭರತ್ ಎಲ್., ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪ್ರಿಯಾ, ಸೇವಾ ಪ್ರತಿನಿಧಿ ರಶ್ಮಿತಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಗೌಡ, ಬೀಟ್ ಪೊಲೀಸ್ ಮುತ್ತಪ್ಪ, ತಾಲೂಕು ಶೌರ್ಯ ಮಾಸ್ಟರ್ ಅವಿನಾಶ್ ಭಿಡೆ ಹಾಗೂ ಶೌರ್ಯ ತಂಡದ ಸದಸ್ಯರಾದ ಚೇತನ್ ರೆಖ್ಯ, ಕೃಷ್ಣಪ್ಪ ಗೌಡ, ಮಾದವ, ರಮೇಶ್ ಬಿ., ಶೀನಪ್ಪ, ಕುಶಾಲಪ್ಪ, ಸೋಮಶೇಖರ, ಉಮೇಶ್ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸುಂದರ ಹಾಗೂ ಲೋಕೇಶ್, ಸ್ಥಳೀಯ ನಿವಾಸಿ ಬಾಬು ಕಾರೆಗುಡ್ಡೆ ಭಾಗವಹಿಸಿ ಶ್ರಮದಾನದಲ್ಲಿ ಕೈಜೋಡಿಸಿದರು.



