ಕೊಕ್ಕಡ: ಪಟ್ಲಡ್ಕ ದೈವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತಾಚರಣಾ ನೂತನ ಸಮಿತಿ ರಚನೆ

ಶೇರ್ ಮಾಡಿ

 

ಕೊಕ್ಕಡ: ಪಟ್ಲಡ್ಕ ದೈವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತಾಚರಣಾ ನೂತನ ಸಮಿತಿ ರಚನೆ

ಕೊಕ್ಕಡ: ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಅವರ ಅಧ್ಯಕ್ಷತೆಯಲ್ಲಿ ವರಮಹಾಲಕ್ಷ್ಮೀ ವ್ರತಾಚರಣಾ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಗೀತಾ ನೆಲ್ಯಡ್ಕ, ಅಧ್ಯಕ್ಷರಾಗಿ ದೀಕ್ಷಾ ಸಾಲ್ಯಾನ್, ಉಪಾಧ್ಯಕ್ಷರಾಗಿ ಮಮತಾ ಪಟ್ಲಡ್ಕ, ಕಾರ್ಯದರ್ಶಿಯಾಗಿ ಲತಾ ಪಟ್ಲಡ್ಕ ಹಾಗೂ ಕೋಶಾಧಿಕಾರಿಯಾಗಿ ಕುಮಾರಿ ಪ್ರೇಮ ಪಟ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಪದ್ಮಾವತಿ, ಲೀಲಾವತಿ, ರುಕ್ಮಿಣಿ, ರಾಧಿಕಾ, ರಮ್ಯ, ಸುಶೀಲ ಎನ್., ಬೇಬಿ, ಮಂಜುಳ, ಸುಮತಿ, ವಸಂತಿ, ಭಾರತಿ, ಗೀತಾ ಸತೀಶ್, ಗೀತಾ ಹರೀಶ್, ಗಿರಿಜಾ ಶೀನಾ, ಕಮಲ, ಸುಂದರಿ, ಸುನಂದ ಶೆಟ್ಟಿ, ವಿಮಲ, ಗಿರಿಜ, ಸವಿತಾ ವಸಂತ, ಪುಷ್ಪವತಿ, ಪುಷ್ಪವತಿ ರಾಮಣ್ಣ, ಸುಮವತಿ ಸುದರ್ಶನ್ ಹಾಗೂ ರಮ್ಯ ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷ ಹರೀಶ್ ಪಿ., ಪ್ರಕಾಶ್ ರೈ, ಪ್ರದಾನ ಕಾರ್ಯದರ್ಶಿ ದೀಕ್ಷಾ ಸಾಲ್ಯಾನ್, ಜತೆ ಕಾರ್ಯದರ್ಶಿ ಪ್ರಕಾಶ್ ರಾವ್, ಕೋಶಾಧಿಕಾರಿ ಸತೀಶ್ ಪಿ., ಸದಸ್ಯರಾದ ನವೀನ್ ಪೂಜಾರಿ ಪಟ್ಲಡ್ಕ, ಕರುಣಾಕರ ಪೂಜಾರಿ ಪಟ್ಲಡ್ಕ, ಗಣೇಶ ಕಾಶಿ ಕೊಕ್ಕಡ, ಗಣೇಶ ಪೂಜಾರಿ ಪೋಸೊಲಿಗೆ ನೆಲ್ಯಾಡಿ, ವಿಶಾಲಾಕ್ಷಿ ಕೊಕ್ಕಡ ಹಾಗೂ ಆಡಳಿತ ಮೊಕ್ತೇಸರ ವಿಶ್ವನಾಥ ಪಟ್ಲಡ್ಕ ಉಪಸ್ಥಿತರಿದ್ದು, ನೂತನ ಸಮಿತಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

 

Leave a Reply

error: Content is protected !!