ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯದಲ್ಲಿ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ

ಶೇರ್ ಮಾಡಿ

 

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯದಲ್ಲಿ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ

ನೆಲ್ಯಾಡಿ: ಇಲ್ಲಿನ ಸೂರ್ಯನಗರದಲ್ಲಿರುವ ಶ್ರೀ ರಾಮ ವಿದ್ಯಾಲಯದಲ್ಲಿ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಹಾಗೂ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು ವಹಿಸಿ ಮಾತನಾಡಿ ವರಮಹಾಲಕ್ಷ್ಮಿ ಪೂಜೆ ನಮ್ಮ ಸಂಸ್ಕೃತಿ ಮತ್ತು ಕುಟುಂಬದ ಐಕ್ಯತೆಯನ್ನು ಪ್ರತಿಬಿಂಬಿಸುವ ಪವಿತ್ರ ಆಚರಣೆಯಾಗಿದೆ. ಮಹಿಳೆಯರು ಭಕ್ತಿ, ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವದಿಂದ ಪೂಜೆಯಲ್ಲಿ ಭಾಗವಹಿಸಬೇಕು. ಶಾಲಾ ಆವರಣದಲ್ಲಿ ನಡೆಯುವ ಈ ಪೂಜೆ ಆಧ್ಯಾತ್ಮಿಕತೆಗೆ ಜೊತೆಗೆ ಸಾಮಾಜಿಕ ಸೌಹಾರ್ದವನ್ನೂ ಬೆಳೆಸುವ ವೇದಿಕೆಯಾಗಲಿದೆ. ಎಲ್ಲ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪೂಜಾ ಸಮಿತಿಯ ಉಪಾಧ್ಯಕ್ಷೆ ರೇವತಿ, ಕಾರ್ಯದರ್ಶಿ ಪ್ರಿಯ, ಕೋಶಾಧಿಕಾರಿ ಸುಮಲತಾ, ಜೊತೆ ಕಾರ್ಯದರ್ಶಿ ಲಲಿತಾ, ಪೂಜಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀರಾಮ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಕಾವ್ಯ, ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಮಾತಾಜಿ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

CALL NOW 8606485844

 

Leave a Reply

error: Content is protected !!