ಶಿಬಾಜೆ: ಕಲ್ಲು ತೂರಾಟ, ಜೀವಬೆದರಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಶೇರ್ ಮಾಡಿ

 

ಶಿಬಾಜೆ: ಕಲ್ಲು ತೂರಾಟ, ಜೀವಬೆದರಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಶಿಬಾಜೆ: ಬೆಳ್ತಂಗಡಿ ತಾಲೂಕಿನ ಶಿಬಾಜೆ ನಿವಾಸಿ ಎಲಿಯಮ್ಮ ತೋಮಸ್‌ (60) ಅವರ ದೂರಿನ ಮೇರೆಗೆ ಮನೋಜ್ ಎನ್.ಕೆ. ಮತ್ತು ರಾಜು ಎಂಬವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಜುಲೈ 10ರ ರಾತ್ರಿ ಎಲಿಯಮ್ಮ ತೋಮಸ್ ಅವರು ತಮ್ಮ ಮನೆಯಲ್ಲಿದ್ದ ವೇಳೆ ಆರೋಪಿಗಳು ಮನೆಯ ಬಳಿಗೆ ಬಂದು ಹಂಚಿಗೆ ಕಲ್ಲುಗಳನ್ನು ತೂರಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಎಲಿಯಮ್ಮ ತೋಮಸ್‌ ರ ಮಗನಿಗೆ ಜೀವಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಆರೋಪಿತ ಮನೋಜ್ ಎಂಬಾತ ಮನೆಯ ಹೊರಾಂಡದಲ್ಲಿದ್ದ ರೂ. 2,900 ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

CALL NOW 8606485844

 

Leave a Reply

error: Content is protected !!