ಇಚ್ಲಂಪಾಡಿ: ಅಕ್ಷಯ್ ಹೋಟೆಲ್ ಬಂದ್ ಮಾಡುವುದಕ್ಕೆ ತಡೆಯಾಜ್ಞೆ

ಶೇರ್ ಮಾಡಿ

 

ಇಚ್ಲಂಪಾಡಿ: ಅಕ್ಷಯ್ ಹೋಟೆಲ್ ಬಂದ್ ಮಾಡುವುದಕ್ಕೆ ತಡೆಯಾಜ್ಞೆ

ನೆಲ್ಯಾಡಿ: ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ್ ಹೋಟೆಲ್ ಬಂದ್ ಮಾಡುವುದಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಪುತ್ತೂರು ಸಿವಿಲ್ ನ್ಯಾಯಾಲಯ ಜು.28ರಂದು ಆದೇಶಿಸಿದೆ.

ಅಕ್ಷಯ್ ಹೋಟೆಲ್ ಮಾಲಕರು ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನೂಜಿಬಾಳ್ತಿಲ ಗ್ರಾ.ಪಂ.ಪಿಡಿಒ ಅವರು ಹೋಟೆಲ್ ಬಂದ್ ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಹೋಟೆಲ್ ಮಾಲಕರು ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಸದ್ರಿ ಪ್ರಕರಣದಲ್ಲಿ ಅಕ್ಷಯ್ ಹೋಟೆಲ್ ವ್ಯವಹಾರಕ್ಕೆ ತೊಂದರೆ ಮಾಡದಂತೆ ತಡೆಯಾಜ್ಞೆ ನೀಡಿ ಜು.28ರಂದು ಆದೇಶಿಸಿದೆ.

ಅಕ್ಷಯ್ ಹೋಟೆಲ್ ಮಾಲಕ ಈಶ್ವರ ಗೌಡರ ಪರವಾಗಿ ನ್ಯಾಯಾವಾದಿಗಳಾದ ಲೋಕೇಶ್ ಯಂ.ಜೆ., ಕೃಷ್ಣಪ್ಪ ಗೌಡ ಕಕ್ವೆ ಹಾಗೂ ಕವನ ಬಿ.ವಾದಿಸಿದರು.

 

Leave a Reply

error: Content is protected !!