ನೇಸರ ಮಾ.31: ಶಿರಾಡಿ ಘಾಟಿ ಕೆಂಪುಹೊಳೆಯ ಸಮೀಪ ಆಂಧ್ರ ಕಡೆಯಿಂದ ಮಂಗಳೂರಿನ ಕಡೆಗೆ ಮೀನು ಸಾಗಾಟದ ಲಾರಿ ಪಲ್ಟಿ ಹೊಡೆದ ಪರಿಣಾಮ, ಹೆದ್ದಾರಿಯಲ್ಲಿ ಬರುತ್ತಿದ್ದ ಎರಡು ಬಸ್ಸು ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಸರಣಿ ಅಪಘಾತ ಇಂದು ಬೆಳಗ್ಗೆ(ಮಾ 31) ಸಂಭವಿಸಿದೆ.
ಘಟನೆಯಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡು ಆತನನ್ನು ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ, ಉಳಿದ ವಾಹನದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಅವರನ್ನು ನೆಲ್ಯಾಡಿಯ ಅಶ್ವಿನಿ ಆಂಬುಲೆನ್ಸ್ ನಲ್ಲಿ ಕರೆತಂದು, ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.