ನೇಸರ ಮಾ.31: ಜೇಸಿಐ ವಿಟ್ಲ ಘಟಕದ ವತಿಯಿಂದ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ನಿವೃತ್ತ ಯೋಧ ಅಶೋಕ್ ಎಂ ಮಾಡ್ತಾರ್ ಇವರನ್ನು ಮಾ.30 ರಂದು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ಸ್ವಾಗತಿಸಿ, ಯೋಧರು ದೇಶಕ್ಕಾಗಿ ನೀಡುವ ಸೇವೆ ಹಾಗೂ ತ್ಯಾಗವನ್ನು ವಿವರಿಸಿದರು. ಜೇಸಿ ಕ್ಲಿಫರ್ಡ್ ವೇಗಸ್ ಸನ್ಮಾನಪತ್ರ ವಾಚಿಸಿದರು, ಸನ್ಮಾನಿತ ರಾದ ಅಶೋಕ್ ಎಂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಜೇಸಿ ರಾಜೀವ್ ಜೇಸಿವಾಣಿ ವಾಚಿಸಿದರು, ಕಾರ್ಯದರ್ಶಿ ಜೇಸಿ ನವೀನ್ ಚಂದ್ರ ವಂದಿಸಿದರು. ನಿಕಟ ಪೂರ್ವಾಧ್ಯಕ್ಷ ಜೇಸಿ ಚಂದ್ರಹಾಸ ಶೆಟ್ಟಿ, ಪೂರ್ವಧ್ಯಕ್ತ್ಧರುಗಳಾದ ಜೇಸಿ ರಮೇಶ್ ಬಿ.ಕೆ, ಜೇಸಿ ಸೋಮಶೇಖರ್ ಹಾಗೂ ಸದಸ್ಯರುಗಳಾದ ಜೇಸಿ ಪರಮೇಶ್ವರ ಹೆಗಡೆ, ಜೇಸಿ ಮನೋರಂಜನ್ ಉಪಸ್ಥಿತರಿದ್ದರು.
—ಜಾಹೀರಾತು—