ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವೈಯಕ್ತಿಕ ವಿಮಾ ಮೊತ್ತ ಹೆಚ್ಚಳ -ಡಾ|ವೀರೇಂದ್ರ ಹೆಗ್ಗಡೆ

ಶೇರ್ ಮಾಡಿ

ನೇಸರ ಎ02: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವೈಯಕ್ತಿಕ ವಿಮಾ ಮೊತ್ತವನ್ನು 10 ಸಾವಿರ ರೂ ನಿಂದ 20 ಸಾವಿರ ರೂ ಗೆ ಹೆಚ್ಚಿಸುವ ಮೂಲಕ ವಿಮಾ ಯೋಜನೆಯ ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಹೇಳಿದರು.

2021- 22ನೇ ಸಾಲಿನಲ್ಲಿ ಯೋಜನೆಯ ವತಿಯಿಂದ ರಾಜ್ಯದ 3 ಆಸ್ಪತ್ರೆಗಳಿಗೆ 6 ಕೋಟಿ ರೂ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಯಂತ್ರ ಒದಗಿಸಲಾಗಿದೆ. ಕಾಸರಗೋಡಿನ ಜನಾರ್ಧನ ಆಸ್ಪತ್ರೆ, ಪುತ್ತೂರಿನ ಪ್ರಗತಿ ಆಸ್ಪತ್ರೆ ಮತ್ತು ಚನ್ನರಾಯಪಟ್ಟಣದ ಆಸ್ಪತ್ರೆಗೆ ನೀಡಲಾಗಿದೆ. 2022-23 ನೇ ಸಾಲಿನಲ್ಲಿ ರಾಜ್ಯದ ಇನ್ನೂ 3 ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್ ಯಂತ್ರ ಒದಗಿಸಲಾಗುತ್ತದೆ ಎಂದು ಹೇಳಿದರು.
ಸಹಾಯಕ ಆಯುಕ್ತ ಡಾ|ಗಿರೀಶ್ ನಂದನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ|ನರಸಿಂಹ ಶರ್ಮಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮುಖ್ಯ ಅತಿಥಿಗಳಾಗಿ ಮಾತನಾಡಿ ದರು. ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹಾಬಲ ರೈ ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಶ್ರೀ ಕ್ಷೇತ್ರದ ವತಿಯಿಂದ ಪುತ್ತೂರಿಗೆ ಡಯಾಲಿಸಿಸ್ ಘಟಕ ಒದಗಿಸುವ ಬಗ್ಗೆ ಆದ್ಯತೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡಿದರು.
ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ರವರು 2022 – 23 ನೇ ಸಾಲಿನಲ್ಲಿ ರಾಜ್ಯದಲ್ಲಿ 442 ಆಸ್ಪತ್ರೆಗಳಲ್ಲಿ ಸಂಪೂರ್ಣ ಸುರಕ್ಷತಾ ಯೋಜನೆ ಲಭ್ಯವಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ತಾಲೂಕು ಯೋಜನಾಧಿಕಾರಿ ಆನಂದ್, ಕೃಷಿಯಂತ್ರಧಾರ ಯೋಜನೆಯ ಯೋಜನಾಧಿಕಾರಿ ಉಮೇಶ್, ತಾಲೂಕು ಕೃಷಿ ಅಧಿಕಾರಿ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಶ್ರೀಪತಿ ರಾವ್ ಎಲ್ಲರನ್ನು ಸ್ವಾಗತಿಸಿದರು. ಡಾ| ಹೆಗಡೆಯವರಿಗೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿ, ಯೋಜನಾಧಿಕಾರಿ ಕಚೇರಿ, ಜನಜಾಗೃತಿ ವೇದಿಕೆ, ಆಸ್ಪತ್ರೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಡಾ.ಸುಧಾರಾವ್ ವಂದಿಸಿದರು. ಅನ್ನಪೂರ್ಣ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.

ವೀಕ್ಷಿಸಿ SUBSCRIBERS ಮಾಡಿ

Leave a Reply

error: Content is protected !!