ಉಪ್ಪಿನಂಗಡಿ: ಯುಗಾದಿಯ ಆಚರಣೆ ಮತ್ತು ಶಾಶ್ವತ ಯೋಜನೆಗೆ ಚಾಲನೆ

ಶೇರ್ ಮಾಡಿ

ನೇಸರ ಎ02: ಜೇಸಿಐ ಉಪ್ಪಿನಂಗಡಿ ಘಟಕದ ವರ್ಷದ ಶಾಶ್ವತ ಯೋಜನೆಯ ಅಂಗವಾಗಿ “ನನ್ನ ಜೇಸಿ ನನ್ನ ಕೊಡುಗೆ” ಅನ್ನುವ ಕಾರ್ಯಕ್ರಮದಡಿಯಲ್ಲಿ ಅಡಿಕೆ ಕೃಷಿಗಾಗಿ ಮೊದಲ ಹಂತದಲ್ಲಿ 500 ಅಡಿಕೆಗಳನ್ನು ಬಜತ್ತೂರು ಗ್ರಾಮದ ಕಾಂಚನ ಸಮೀಪದ ಬಿದಿರಾಡಿಯಲ್ಲಿ ಘಟಕದ ಶಾಶ್ವತ ಯೋಜನೆಯನ್ನು ಕಾರ್ಯಗತಗೊಳಿಸಲು ಆಸಕ್ತಿ ವಹಿಸಿದ ಕುಟುಂಬಗಳಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಮೋಹನ್ ಚಂದ್ರ ತೋಟದಮನೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೂರ್ವಾಧ್ಯಕ್ಷರಾದ ಜೇಸಿ ಪ್ರಶಾಂತ್ ಕುಮಾರ್ ರೈ ಭಾಗವಹಿಸಿ ಜೇಸಿಯು ವ್ಯಕ್ತಿತ್ವ ವಿಕಾಸನ ಸಂಸ್ಥೆ. ಇಲ್ಲಿ 18 ವಯಸ್ಸಿನಿಂದ 40 ವಯಸ್ಸಿನೊಳಗಿನ ಯುವಜನತೆಯನ್ನು ತರಬೇತಿಯ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯಗೊಳಿಸುವ ಸಂಸ್ಥೆಯಾಗಿದೆ. ನಿಕಟಪೂರ್ವ ಅಧ್ಯಕ್ಷರಾದ ಜೇಸಿ.ಕೆ.ವಿಶ್ವನಾಥ್ ಕುಲಾಲ್ ಈ ವರ್ಷದ ಶಾಶ್ವತ ಯೋಜನೆಯಾದ ಅಡಿಕೆ ಕೃಷಿ ಕುರಿತು ಮಾತನಾಡಿ, ಇದು ಹೆಚ್ಚು ಪರಿಶ್ರಮ ಬಯಸುವ ಕೃಷಿ. ವ್ಯವಸ್ಥಿತವಾಗಿ ಕೃಷಿಯನ್ನು ಮಾಡಿದರೆ ಬದುಕು ಬಂಗಾರವಾಗುತ್ತದೆ. ಆ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಯಬೇಕೆಂದರು.
ಶಾಶ್ವತ ಯೋಜನೆಯ ನಿರ್ದೇಶಕರಾದ ಜೇಸಿ ಮಹೇಶ್ ಖಂಡಿಗ ಮಾತನಾಡಿ ಜೇಸಿ ಸಂಸ್ಥೆ ಜಾತಿ, ಮತ, ಪಂಥ, ಪಕ್ಷ ಮೀರಿ ವ್ಯಕ್ತಿತ್ವ ವಿಕಸನ ಮಾಡುವ ಸಂಸ್ಥೆಯಾಗಿದೆ. ವ್ಯಕ್ತಿತ್ವ ರೂಪಿಸುವ ಕಾರ್ಯಚಟುವಟಿಕೆಗಳ ಜೊತೆಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಇದರ ಒಂದು ಭಾಗವಾಗಿ ಶಾಶ್ವತ ಯೋಜನೆಯನ್ನು ಈ ಪರಿಸರದಲ್ಲಿ ಜಾರಿಗೆ ತರುತ್ತಿದ್ದೇವೆ. ಈ ಕಾರ್ಯಕ್ಕೆ ಎಲ್ಲಾರ ಸಹಕಾರವನ್ನು ಕೋರಿದರು. ಕಾರ್ಯಕ್ರಮದಲ್ಲಿ ತಿಮ್ಮಪ್ಪ, ಪ್ರಭಾಕರ, ಪೇರ್ನ, ಸಗುಣ, ಪಿಜಿನಾ, ದಿವಾಕರ, ರಮೇಶ್, ನೋಣಯ್ಯ, ಗಿರಿಜಾ, ಕಾವೇರಿ ಸೇರಿದಂತೆ ಕಾರ್ಯಕ್ರಮದಲ್ಲಿ 35 ಜನರು ಪಾಲ್ಗೊಂಡಿದ್ದರು.
ನಾಗೇಶ್, ಜಗದೀಶ್, ಸಂತೋಷ್ ಮತ್ತು ಪ್ರಶಾಂತ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಯುಗಾದಿಯ ಅಂಗವಾಗಿ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು.

ವೀಕ್ಷಿಸಿ SUBSCRIBERS ಮಾಡಿ

Leave a Reply

error: Content is protected !!