ನೇಸರ ಎ.05: ಶಿರಾಡಿ ಗ್ರಾಮಪಂಚಾಯತ್ ನ ಉದ್ಯೋಗ ಖಾತರಿ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 44 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ 540 ಮೀಟರ್, ಮಲ್ನಾಡು ರಸ್ತೆ 120 ಮೀಟರ್ ಹಾಗೂ ಅಡ್ಡಹೊಳೆ ಶಾಲೆ ಬಳಿ 100 ಮೀಟರ್, ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಸಮಾರಂಭ ಎ.04ರಂದು ನಡೆಯಿತು.
ನರೇಗಾ ಯೋಜನೆಯಡಿ ರೂ.5ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ರಾಜೀವ್ ಗಾಂಧಿ ರಸ್ತೆಯನ್ನು ರಮಾನಾಥ ರೈ, ಮಾಜಿ ಅರಣ್ಯ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ ಇವರು ಉದ್ಘಾಟಿಸಿದರು,
ರೂ 5ಲಕ್ಷ ನರೇಗಾ ಯೋಜನೆಯಡಿ ಕಾಂಕ್ರೀಟಿಕರಣವಾದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅಡ್ಡಹೊಳೆ ಬಳಿಯಿಂದ ಹಾದುಹೋಗುವ ರಸ್ತೆಯನ್ನು ಶ್ರೀಮತಿ ರಾಗಿಣಿ ಯವರು ಉದ್ಘಾಟಿಸಿದರು. ಸಾಬು ರವರ ಮನೆಯ ಬಳಿ ನರೇಗಾ ಯೋಜನೆ ಅಡಿ ರೂ 5ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಶಿರಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವಿನೀತ ಎಂ.ಬಿ ರವರು ಉದ್ಘಾಟಿಸಿದರು, ಸಿ.ವಿ.ಜೋಯಿ ಮನೆ ಬಳಿ ನರೇಗಾ ಯೋಜನೆಯಡಿ ರೂ 5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣದ ರಸ್ತೆಯನ್ನು ರೇ.ಪಾ.ಜೋಸೆಫ್ ಪಾಂಬೆಕ್ಕೆಲ್, ಸೈಂಟ್ ಜೋಸೆಫ್ ಚರ್ಚ್ ಅಡ್ಡಹೊಳೆ ರವರು ಉದ್ಘಾಟಿಸಿದರು, 15ನೇ ಹಣಕಾಸು ಯೋಜನೆಯಡಿಯಲ್ಲಿ ರೂ.1 ಲಕ್ಷ ವೆಚ್ಚದಲ್ಲಿ ಓಟ್ಲ ಸಾಬುರವರ ಮನೆ ಪಕ್ಕ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ವಿಜಯನ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಇವರು ಉದ್ಘಾಟಿಸಿದರು. ಸೈಂಟ್ ಮೇರಿಸ್ ಚರ್ಚ್ ಬಳಿ ನರೇಗಾ ಯೋಜನೆಯಡಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ರೇ.ಪಾ.ಸತ್ಯನ್ ತೋಮಸ್ OIC, ಸಂಚಾಲಕರು ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿ, ರೂ 5ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆ ಅಡಿ ನಿರ್ಮಾಣವಾದ ಓಟ್ಲ ರಸ್ತೆ ಕಾಂಕ್ರೀಟಿಕರಣವನ್ನು ಗ್ರಾಮ ಪಂಚಾಯತ್ ಸದಸ್ಯ ಎಂ ಕೆ. ಪೌಲೋಸ್, ಉದ್ಘಾಟಿಸಿದರು. 15ನೇ ಹಣಕಾಸು ಯೋಜನೆ ಅಡಿ ರೂ 1 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಸೆಂಬ್ಲಿ ಆಫ್ ಗೂಡ್ಸ್ ಚರ್ಚ್ ಇದರ ಉದ್ಘಾಟನೆಯನ್ನು ಸಣ್ಣಿ ಪೂಕಳತ್ ಕುನ್ನೇಲ್ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚ್ ಅಡ್ಡಹೊಳೆ ಆಡಳಿತ ಮಂಡಳಿ ಸದಸ್ಯರು ಉದ್ಘಾಟಿಸಿದರು. ನರೇಗಾ ಯೋಜನೆ ಅಡಿ 5ಲಕ್ಷ, 15ನೇ ಹಣಕಾಸು ಯೋಜನೆಯಡಿ 1ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಲೆನಾಡು ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ ಮಾಡಿಸಲಾಯಿತು.
ಬಳಿಕ ಅಡ್ಡಹೊಳೆ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ ರಮಾನಾಥ ರೈ ಯವರು ಕಡಬ ತಾಲ್ಲೂಕಿಗೂ ನನಗೂ ಒಂದು ರೀತಿಯ ಸಂಬಂಧವಿದೆ. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕಡಬ ತಾಲೂಕಿನಲ್ಲಿ ನಿರಾಶ್ರಿತ ತಮಿಳರಿಗೆ ಜಾತಿ ಸರ್ಟಿಫಿಕೇಟ್, ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು, ಇಚ್ಲಂಪಾಡಿ ಹಾಗೂ ಕಡಬ ತಾಲ್ಲೂಕಿನಾದ್ಯಂತ ನಡೆದ ವಿವಿಧ ಸೇತುವೆ, ರಸ್ತೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೇನೆ, ನನ್ನ ಸಚಿವ ಸ್ಥಾನದ ಅವಧಿಯಲ್ಲಿ ಕಡಬ ತಾಲೂಕಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು. ಕಡಬ ತಾಲೂಕು ರಚನೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಈಗಲೂ ಚರ್ಚೆಗಳು ಆಗುತ್ತಲಿದೆ. ಇದಕ್ಕೆ ಮೂಲ ಕಾರಣಕರ್ತರು ನಾನು ಎಂಬುದಕ್ಕೆ ನಾನು ನಂಬಿದ ದೇವರಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನಿಗೆ ಗೊತ್ತಿದೆ. ಪ್ರಥಮ ಬಾರಿಗೆ ವಿಶೇಷ ತಹಶೀಲ್ದಾರ್ ರನ್ನು ನೇಮಕ ಮಾಡಿದ್ದು ರಮಾನಾಥ ರೈ ಯವರು. ಬಂಟ್ವಾಳ ತಾಲೂಕಿನಲ್ಲಿ ವಿಟ್ಲ ತಾಲೂಕು ರಚನೆಗೆ ಬೇಡಿಕೆ ಇತ್ತು, ಆದರೆ ನಾನು ಕಡಬ ತಾಲೂಕು ರಚನೆ ಮಾಡಿಸಿದೆ, ಅದೇ ರೀತಿ ಪಶುವೈದ್ಯಕೀಯ ಕಾಲೇಜು ಬಂಟ್ವಾಳ ಕ್ಷೇತ್ರದಲ್ಲಿ ಮಾಡಲು ನನಗೆ ಅವಕಾಶವಿತ್ತು ಆದರೆ ನಾನು ಕಡಬ ತಾಲೂಕಿನಲ್ಲೇ ಮಾಡಿದ್ದೇನೆ ಎಂದು ಈ ಸಂದರ್ಭದಲ್ಲಿ ರಮಾನಾಥ ರೈ ಅವರು ಹೇಳಿದರು.
ಎಂ.ಕೆ.ಪೌಲೋಸ್ ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ 19.50 ಅನುದಾನದಲ್ಲಿ ಶೌಚಾಲಯ ನಿರ್ಮಾಣ, 44 ಲಕ್ಷ ರೂ ಅನುದಾನದಲ್ಲಿ ಅಡ್ಡೆಯಲ್ಲಿ ರಸ್ತೆ ಕಾಂಕ್ರೀಟಿಕರಣ ರಸ್ತೆ, ಇದು ಕೇವಲ ಒಂದು ವರ್ಷದಲ್ಲಿ ಶಿರಾಡಿ ಗ್ರಾಮದ 3ನೇ ವಾರ್ಡಿನಲ್ಲಿ ಮಾಡಿದ ಸಾಧನೆಯಾಗಿದೆ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ರವರ ಸಹಕಾರದಿಂದ ಸಾಧ್ಯವಾಗಿದೆ. ಮತದಾನದ ಸಮಯದಲ್ಲಿ ಗ್ರಾಮಸ್ಥರು ನೀಡಿರುವ ಬೇಡಿಕೆ ಈಡೇರಿಸಿದ ತೃಪ್ತಿ ನನಗಿದೆ ಎಂದು ಹೇಳಿದರು. ರಮಾನಾಥ ರೈಯವರು ಸಚಿವರಾಗಿದ್ದಾಗ ಸುಮಾರು 25 ವರ್ಷದ ಹಿಂದೆ ಗುಂಡ್ಯ, ಸಿರಿಬಾಗಿಲು ಭಾಗಕ್ಕೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಸಹಕಾರ ನೀಡಿದ್ದಾರೆ ಅಲ್ಲದೆ ಶಿರಾಡಿ ಶಿರ್ವತಡ್ಕ ರಸ್ತೆಗೆ ಅನುದಾನ, ಫುಲ್ಲೊಟ್ಟೆ ರಸ್ತೆಗೆ ಅನುದಾನ, ಶಿರಾಡಿ ಗ್ರಾಮ ಪಂಚಾಯತ್ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಅನೇಕ ವಿವಿಧ ಕೆಲಸಗಳಿಗೆ ಸಚಿವರು ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎಂದು ಈ ಸಂದರ್ಭದಲ್ಲಿ ಎಂ.ಕೆ.ಪೌಲೋಸ್ ರವರು ನೆನಪಿಸಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೀತಾ ತಂಗಚ್ಚನ್ ವಹಿಸಿದರು. ಜಿ. ಪಂ.ಮಾಜಿ ಸದಸ್ಯರಾದ ಪಿ.ಪಿ ವರ್ಗೀಸ್, ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್,ಆಶಾ ಲಕ್ಷ್ಮಣ್ ಗುಂಡ್ಯ, ಅಡ್ಡಹೊಳೆ ಸೈಂಟ್ ಜೋಸೆಫ್ ಚರ್ಚಿನ ರೇ.ಪಾ. ಜೋಸೆಫ್ ಪಾಂಬೆಕ್ಕಲ್, ಗ್ರಾಮ ಪಂಚಾಯತಿನ ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಸಣ್ಣಿಜಾನ್, ಸುಮಿತ್ರ, ಕೆಪಿಸಿಸಿ ಮುಖಂಡ ಕೃಷ್ಣಪ್ಪ, ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಸಣ್ಣಿ.ಪಿ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಿಶ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ :
ಮಾಜಿ ಸಚಿವ ಬಿ ರಮಾನಾಥ ರೈ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನಿತಾ ತಂಗಚ್ಚನ್, ಸದಸ್ಯ ಎಂ.ಕೆ ಪೌಲೋಸ್, ಪಿಡಿಓ ವೆಂಕಟೇಶ್, ಕಾರ್ಯದರ್ಶಿ ಶಾರದಾ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ರೂವಾರಿ ಎಂ.ಕೆ ಪೌಲೋಸ್ ರವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
—ಜಾಹೀರಾತು—