ನೆಲ್ಯಾಡಿ: ಅಂಗಡಿ ಕಟ್ಟಡ ನಾಶ, ಹಲ್ಲೆಗೆ ಯತ್ನ-ಪೊಲೀಸರಿಗೆ ದೂರು

ಶೇರ್ ಮಾಡಿ

ನೇಸರ ಎ.05: ನೆಲ್ಯಾಡಿ ಗ್ರಾಮ ಪಂಚಾಯತ್‌ನಿಂದ ೧-೨೨೩ ಡೋರ್ ನಂಬ್ರ ಹೊಂದಿರುವ ನೆಲ್ಯಾಡಿ ಪೇಟೆಯಲ್ಲಿರುವ ನನ್ನ ಹಕ್ಕಿನ ಕಟ್ಟಡವನ್ನು ಸಮೀಪದ ಕಟ್ಟಡ ಮಾಲಕ ಹಾಗೂ ಅವರ ಸಹೋದರರು ನಾಶಗೊಳಿಸಿ, ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನೆಲ್ಯಾಡಿ ಸೈಂಟ್ ತೋಮಸ್ ಇಲೆಕ್ಟ್ರಿಕಲ್ಸ್ ಮಾಲಕ ಜೋಯಿ ತೋಮಸ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆಯಲ್ಲಿ ಕಳೆದ ೩೭ ವರ್ಷಗಳಿಂದ ನೆಲ್ಯಾಡಿ ಗ್ರಾಮ ಪಂಚಾಯತ್‌ನ ಡೋರ್ ನಂಬ್ರ ೧-೨೨೩ ಹೊಂದಿರುವ ಕಟ್ಟಡದ ಕೋಣೆಯಲ್ಲಿ ಸೈಂಟ್ ತೋಮಸ್ ಇಲೆಕ್ಟ್ರಿಕಲ್ಸ್ ಎಂಬ ಇಲೆಕ್ಟ್ರಿಲ್ ಗುತ್ತಿಗೆದಾರರ ಕಚೇರಿಯನ್ನು ಹೊಂದಿರುತ್ತೇನೆ. ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆಗೆ ಮಣ್ಣು ಹಾಕಿ ಎತ್ತರಿಸಿದಾಗ ನಮ್ಮ ಕಟ್ಟಡದ ಕೋಣೆಗಳ ಮುಂಭಾಗದಲ್ಲಿ ಮಣ್ಣು ಎತ್ತರಕ್ಕೆ ಬಿದ್ದಿದೆ. ನಮ್ಮ ಕಟ್ಟಡದ ಪಕ್ಕದ ಅಂಗಡಿಗಳ ಮಾಲಕ ಶಾಂತಪ್ಪ ಗೌಡರವರು ಕಟ್ಟಡವನ್ನು ರಸ್ತೆಯ ಮಟ್ಟಕ್ಕೆ ಎತ್ತರಿಸುವರೇ ಕಾಮಗಾರಿಗಳನ್ನು ಮಾಡುವಾಗ ನನ್ನ ಕಟ್ಟಡದ ಶಟರ್ ಹಾಗೂ ಗೋಡೆಗೆ ಹಾನಿಯಾಗಿದ್ದು ಸದ್ರಿಯವರು ನನ್ನ ಕಟ್ಟಡದ ಕೋಣೆಯನ್ನು ದುರಸ್ಥಿಗೊಳಿಸಿಕೊಟ್ಟಿರುತ್ತಾರೆ. ಹೀಗಿರುವಲ್ಲಿ ಎ.೩ರಂದು ರಾತ್ರಿ ಸುಮಾರು ೮ ಗಂಟೆಗೆ ಪಕ್ಕದ ಜಮಾಲಿಯ ಕಾಂಪ್ಲೆಕ್ಸ್ ಕಟ್ಟಡದ ಮಾಲಕರಾದ ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಗಫಾರ್ ಮತ್ತು ಸನಾವುದ್ದೀನ್ ಎಂಬವರು ನನ್ನ ಕಟ್ಟಡದ ಕೋಣೆಯ ಶಟರ್ ಮುರಿದು ಹಾನಿಗೊಳಿಸಿ ಕೋಣೆಯಲ್ಲಿದ್ದ ಸಾಮಾಗ್ರಿಗಳನ್ನು ನಾಶ ಮಾಡಿರುತ್ತಾರೆ. ಇದನ್ನು ವಿಚಾರಿಸಿದ ನನ್ನ ಮೇಲೆ ಹಲ್ಲೆಗೆ ಬಂದಿದ್ದು ನನಗೆ ಬೆದರಿಕೆ ಹಾಕಿದ್ದಾರೆ. ಸದ್ರಿ ಕಟ್ಟಡ ಕೋಣೆಗಳನ್ನು ಇಲ್ಲಿ ನಾವು ೩೭ ವರ್ಷಗಳ ಹಿಂದೆ ಒಮ್ಮತದಿಂದ ಕಟ್ಟಿರುವುದಾಗಿದ್ದು ಕಟ್ಟಡದ ಗೋಡೆಗಳು ಒಂದಕ್ಕೊಂದು ಪೂರಕವಾಗಿರುತ್ತದೆ. ಕೆಲವು ವರ್ಷಗಳಿಂದೆ ಅಬೂಬಕ್ಕರ್ ಸಿದ್ದೀಕ್‌ರವರು ತನ್ನ ಅಂಶದ ಕಟ್ಟಡವನ್ನು ಕೆಡವಿ ಸದ್ರಿ ಕಟ್ಟಡದ ಹಿಂಬಾಗದಲ್ಲಿರುವ ಜಮೀನಿನಲ್ಲಿ ಕಟ್ಟಡ ಪುನರಚನೆಗೆ ಪರವಾನಿಗೆ ಪಡೆದು ಕಟ್ಟಡವನ್ನು ನಿಗದಿತ ಪ್ಲಾನ್‌ಗಿಂತಲೂ ವಿಸ್ತರಿಸಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದಾರೆ. ಇದೀಗ ನನ್ನ ಹಕ್ಕಿನ ಕಟ್ಟಡದ ಕೋಣೆಯನ್ನು ನಾಶಪಡಿಸಿರುವುದರಿಂದ ನನ್ನ ಉದ್ಯಮಕ್ಕೆ ಬಹಳ ತೊಂದರೆ ಯಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

—ಜಾಹೀರಾತು—

Leave a Reply

error: Content is protected !!