ನೇಸರ ಎ.05: ಪಂಚಾಯತ್ ರಾಜ್ ಇಲಾಖೆ, ದ ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಅಮೃತ ಗ್ರಾಮ ಪಂಚಾಯತ್ ಕೊಕ್ಕಡ ಇದರ ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಕಸಮುಕ್ತ ಗ್ರಾಮ ನಮ್ಮ ಸಂಕಲ್ಪ ದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕೊಕ್ಕಡ, ಸಂಜೀವಿನಿ ಸ್ವಸಹಾಯ ಸಂಘ ಕೊಕ್ಕಡ, ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಕೊಕ್ಕಡ, ಕೊಕ್ಕಡ ಸರಕಾರಿ ಆಸ್ಪತ್ರೆ, ವರ್ತಕರ ಸಂಘ ಕೊಕ್ಕಡ, ಆಟೋ ಚಾಲಕ ಮಾಲಕರ ಸಂಘ ಕೊಕ್ಕಡ, ಶ್ರೀ ಶಕ್ತಿ ಸ್ವಸಹಾಯ ಸಂಘ ಕೊಕ್ಕಡ, ಜೇಸಿಐ ಕಪಿಲ ಕೊಕ್ಕಡ, ಗ್ರಾಮದ ಎಲ್ಲಾ ಶಾಲಾಭಿವೃದ್ಧಿ ಸಮಿತಿ, ಗ್ರಾಮದ ಎಲ್ಲಾ ದೇವಸ್ಥಾನ ಮತ್ತು ಮಸೀದಿಗಳ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ “ಬಯಲು ಕಸ ಮುಕ್ತ ಗ್ರಾಮ ಅಭಿಯಾನ 2022” ಇದರ ಉದ್ಘಾಟನಾ ಕಾರ್ಯಕ್ರಮ ಎ.5ರಂದು ಕೊಕ್ಕಡ ಜೋಡುಮಾರ್ಗ ಜಂಕ್ಷನ್ ನಲ್ಲಿ ಉದ್ಘಾಟಿಸಲಾಯಿತು.
ಕೊಕ್ಕಡ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಸ್ವಾಗತಿಸಿದರು. ನೋಡಲ್ ಅಧಿಕಾರಿ ಡಾ.ಜಯಕೀರ್ತಿ ಜೈನ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬರೂ ತನ್ನ ಕರ್ತವ್ಯವನ್ನು ಅರಿತು, ಕಟ್ಟಡಗಳ ಹಾಗೂ ಅಂಗಡಿಗಳ ಮುಂದೆ, ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ, ಇನ್ನಿತರ ಖಾಲಿ ಇರುವ ಸ್ಥಳಗಳಲ್ಲಿ ಕಸವನ್ನು ಬಿಸಾಡ ಬಾರದು. ಒಂದು ವೇಳೆ ಕಸ ಬಿಸಾಡುವುದು ಅಧಿಕಾರಿಗಳ ಗಮನಕ್ಕೆ ಬಂದಲ್ಲಿ ಅವರ ಮೇಲೆ ಸರಕಾರ ನಿಯಮದಂತೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ ಅಲಂಬಿಲ ಮಾತನಾಡಿ ಸ್ವಚ್ಛ ಗ್ರಾಮವನ್ನು ಮಾಡಲು ನಿಮ್ಮೆಲ್ಲರ ಸಹಕಾರ ಅತಿ ಅಗತ್ಯ, ಬಯಲು ಕಸ ಮುಕ್ತ ಗ್ರಾಮ ಅಭಿಯಾನ 2022 ಇಂದು ಉದ್ಘಾಟನೆಗೊಂಡು ಇದು ನಿರಂತರ ನಡೆಯುವಂತಹ ಕಾರ್ಯಕ್ರಮವಾಗಿದ್ದು, ಈ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು. ತಪ್ಪಿತಸ್ತರಿಗೆ ದಂಡ ವಿಧಿಸಿ ದಾಖಲೆ ಸಮೇತ ಮಾಹಿತಿ ಪಂಚಾಯತಿಗೆ ನೀಡಿದವರಿಗೆ 1000 ರೂಪಾಯಿ ಬಹುಮಾನ ನೀಡಲಾಗುವುದು ಮಾಹಿತಿದಾರರ ಹೆಸರನ್ನು ಗೌಪ್ಯಾವಾಗಿಡುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ವತಿಯಿಂದ ಬಯಲು ಕಸಮುಕ್ತ ಗ್ರಾಮ ಅಭಿಯಾನ 2022 ರ ರಾಯಭಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಜೇಸಿ.ಎಚ್ ಜಿ ಎಫ್. ಜೋಸೆಫ್ ಪಿರೇರಾ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ಮೋಹನ್ ದಾಸ್ ಗೌಡ ಪಂಚಮಿ ಹಿತಾಯುರ್ಧಾಮ ಕೊಕ್ಕಡ, ಕೊಕ್ಕಡ ಸಿ ಎ ಬ್ಯಾಂಕಿನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಜೇಸಿಐ ಕೊಕ್ಕಡ ಕಪಿಲದ ಅಧ್ಯಕ್ಷರಾದ ಜೇಸಿ.ಶ್ರೀಧರ.ಕೆ, ಜೇಸಿಐ ಕಾರ್ಯದರ್ಶಿ ಜೇಸಿ.ನರಸಿಂಹ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತಾ, ಗ್ರಾ.ಪಂ. ಕಾರ್ಯದರ್ಶಿ ಭಾರತಿ, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಪವಿತ್ರ, ಸದಸ್ಯರುಗಳಾದ ಪ್ರಭಾಕರ ಗೌಡ, ಜಗದೀಶ ಕೆಂಪಕೋಡಿ, ಪುರುಷೋತ್ತಮ, ಶ್ರೀಮತಿ ಜಾನಕಿ, ಶ್ರೀಮತಿ ವನಜಾಕ್ಷಿ, ಶ್ರೀಮತಿ ಲತಾ, ಕೊಕ್ಕಡ ಸರಕಾರಿ ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಗಿರಿಯಪ್ಪ, ಶೀನ ನಾಯ್ಕ, ಸಂಜೀವಿನಿ ಒಕ್ಕೂಟ ಅಧ್ಯಕ್ಷರು ಶ್ರೀಮತಿ ಶುಭಲತಾ. ಆಶಾಕಾರ್ಯಕರ್ತರು. ಅಂಗನವಾಡಿ ಕಾರ್ಯಕರ್ತರು. ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಶ್ರೀಮತಿ ವೀಣಾ, ವಿನ್ಸೆಂಟ್ ಮಿನೇಜಸ್, ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹೈದರ್, ಸದಸ್ಯರು ಇಸುಬು ಹಳ್ಳಿಗೇರಿ. ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾ.ಪಂ.ಸಿಬ್ಬಂದಿಗಳು ಮೊದಲಾದವರು ಸಹಕರಿಸಿದರು.
ಕೊಕ್ಕಡ ಜೋಡುಮಾರ್ಗದಿಂದ ಕೊಕ್ಕಡ ಪೇಟೆಯವರೆಗೆ ಕಸವನ್ನು ಹೆಕ್ಕುವುದರ ಮೂಲಕ ಅಭಿಯಾನ ಮಾಡಲಾಯಿತು. ಕೇಶವ ಹಳ್ಳಿಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು.
—ಜಾಹೀರಾತು—