ಕೊಕ್ಕಡ ಗ್ರಾ.ಪಂ ರಾಯಭಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಜೇಸಿ.HGF.ಜೋಸೆಫ್ ಪಿರೇರಾ ಆಯ್ಕೆ

ಶೇರ್ ಮಾಡಿ

ನೇಸರ ಎ.05: ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾ.ಪಂ ಬೆಳ್ತಂಗಡಿ, ಅಮೃತ ಗ್ರಾ.ಪಂ ಕೊಕ್ಕಡ ಇದರ ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಕಸಮುಕ್ತ ಗ್ರಾಮ ನಮ್ಮ ಸಂಕಲ್ಪ ದಡಿಯಲ್ಲಿ “ಬಯಲು ಕಸಮುಕ್ತ ಗ್ರಾಮ ಅಭಿಯಾನ 2022 ರ” ಕೊಕ್ಕಡ ಗ್ರಾ.ಪಂ ರಾಯಭಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಜೇಸಿ.ಎಚ್ ಜಿ ಎಫ್. ಜೋಸೆಫ್ ಪಿರೇರಾ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ನೋಡಲ್ ಅಧಿಕಾರಿ ಡಾ.ಜಯಕೀರ್ತಿ ಜೈನ್, ಗ್ರಾ.ಪಂ ಅಧ್ಯಕ್ಷರಾದ ಯೋಗೀಶ ಅಲಂಬಿಲ, ಡಾ.ಮೋಹನ್ ದಾಸ್ ಗೌಡ ಪಂಚಮಿ ಹಿತಾಯುರ್ಧಾಮ ಕೊಕ್ಕಡ, ಕೊಕ್ಕಡ ಜೇಸಿಐ ಕೊಕ್ಕಡ ಕಪಿಲದ ಅಧ್ಯಕ್ಷರಾದ ಜೇಸಿ.ಶ್ರೀಧರ.ಕೆ, ಜೇಸಿಐ ಕಾರ್ಯದರ್ಶಿ ಜೇಸಿ.ನರಸಿಂಹ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತಾ, ಗ್ರಾ.ಪಂ. ಕಾರ್ಯದರ್ಶಿ ಭಾರತಿ, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಪವಿತ್ರ, ಸದಸ್ಯರುಗಳಾದ ಪ್ರಭಾಕರ ಗೌಡ, ಜಗದೀಶ ಕೆಂಪಕೋಡಿ, ಪುರುಷೋತ್ತಮ, ಶ್ರೀಮತಿ ಜಾನಕಿ, ಶ್ರೀಮತಿ ವನಜಾಕ್ಷಿ, ಶ್ರೀಮತಿ ಲತಾ, ಕೊಕ್ಕಡ ಸರಕಾರಿ ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಗಿರಿಯಪ್ಪ, ಶೀನ ನಾಯ್ಕ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಶ್ರೀಮತಿ ವೀಣಾ, ವಿನ್ಸೆಂಟ್ ಮಿನೇಜಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾ.ಪಂ.ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

error: Content is protected !!