ಪಟ್ರಮೆ ಗ್ರಾಮ ಪಂಚಾಯತ್ ಗ್ರಾಮಸಭೆ

ಶೇರ್ ಮಾಡಿ

ನೇಸರ ನ 3:  ಪಟ್ರಮೆ ಗ್ರಾ.ಪಂ. ನ 2021-22 ನೇ ಸಾಲಿನ ಪ್ರಥಮ ಗ್ರಾಮಸಭೆಯು ಕೃಷಿ ಇಲಾಖಾ ಅಧಿಕಾರಿಗಳಾದ ಚಿದಾನಂದ ಹೂಗಾರ್ ಮಾರ್ಗದರ್ಶಿ ಅಧಿಕಾರಿಯಾಗಿ, ಪಂಚಾಯತ್ ಅಧ್ಯಕ್ಷರಾದ ಮೋಹಿನಿಯವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ದಿನಾಂಕ 02-11-2021 ನೇ ಮಂಗಳವಾರ (ಮಧ್ಯಾಹ್ನ 2.30) ನೆರವೇರಿತು.
ಕಂದಾಯ, ತೋಟಗಾರಿಕೆ, ಕೃಷಿ, ಮೆಸ್ಕಾಂ, ಆರೋಗ್ಯ,ಶಿಶು ಕಲ್ಯಾಣ ಸೇರಿದಂತೆ ವಿವಿಧ ಇಲಾಖಾ ಪ್ರತಿನಿಧಿಗಳು ಭಾಗವಹಿಸಿ ಮಾಹಿತಿ ನೀಡಿದರು. ಪಂಚಾಯತ್ ಕಾರ್ಯದರ್ಶಿ ಅಮ್ಮಿ.ಬಿ.ಪಿ ಯವರು 2020-21 ನೇ ಸಾಲಿನ ವರದಿ ಮಂಡಿಸಲಾಗಿ ಅಂಗೀಕಾರಗೊಂಡಿತು. ವಾರ್ಡ್ ಸಭೆಯಲ್ಲಿ ಬಂದಿದ್ದ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿ, ಮುಂದೆ ಆದ್ಯತಾನುಸಾರ ಕ್ರಿಯಾಯೋಜನೆಗಳಲ್ಲಿ ಸೇರಿಸಲು ನಿರ್ಣಯಿಸಲಾಯಿತು. ಆದರೆ ಜನರ ಭಾಗವಹಿಸುವಿಕೆ ತೀರಾ ಕಡಿಮೆ ಇತ್ತು. ಗ್ರಾಮಸಭೆಯು ಗ್ರಾಮದ ಅಭಿವೃದ್ದಿ ದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದು. ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ಸೂಕ್ತ ನಿರ್ಣಯಗಳಾಗಬೇಕು. ಆಡಳಿತ ಮಂಡಳಿಗೆ ಆಡಳಿತ ನಡೆಸುವಲ್ಲಿ ಸೂಕ್ತ ಸಲಹೆಗಳನ್ನು ನೀಡಬೇಕು. ಕಳೆದ ಹಲವು ವರ್ಷಗಳಿಂದಲೂ ವಿವಿಧ ವಿಚಾರಗಳ ಬಗ್ಗೆ ಬಹಳ ಪರಿಣಾಮಕಾರಿಯಾಗಿ ಚರ್ಚೆ ಆಗುತ್ತಿದ್ದಾಗಿ ಪಟ್ರಮೆ ಗ್ರಾಮಸಭೆ ಬಹಳ ಸುದ್ದಿಯಲ್ಲಿತ್ತು. ಆದರೆ ಈ ಸಲ ಅಂತಹ ಯಾವುದೇ ಚರ್ಚೆಗಳಿಲ್ಲದೆ ಪ್ರಾರಂಭ ಆದ ಕೆಲವೇ ಸಮಯದಲ್ಲಿ ಮುಕ್ತಾಯವೂ ಆಗಿತ್ತು. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಕ್ರಿಯರಾಗಿ ಗ್ರಾಮಸಭೆಯನ್ನು ಗ್ರಾಮದ ಅಭಿವೃದ್ದಿಗೆ ಪೂರಕವಾಗಿ ಬಳಸಿಕೊಳ್ಳಲು ತಯಾರಾಗಬೇಕಿದೆ. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಯತೀಶ ಗೌಡ, ಸದಸ್ಯರುಗಳಾದ ಶ್ರೀಮತಿ ಭಾರತಿ, ಶ್ರೀಮತಿ ಮೀನಾ, ಶ್ರೀ ಮನೋಜ್ ಉಪಸ್ಥಿತರಿದ್ದರು.
ಗ್ರಾಮದ ಅಭಿವೃದ್ದಿಗೆ ಜನರ ಸಲಹೆಗಳು, ಸಹಕಾರಗಳು ನಿರಂತರ ಇರಬೇಕೆಂದು ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿನಂತಿಸಿದರು. ಕೊನೆಯಲ್ಲಿ ಪಂಚಾಯತ್ ಸದಸ್ಯ ಮನೋಜ್ ವಂದಿಸಿದರು.

Leave a Reply

error: Content is protected !!