SSLC ಪರೀಕ್ಷೆ ಕೀ ಉತ್ತರಗಳು ಪ್ರಕಟ: ಚೆಕ್‌ ಮಾಡುವ ವಿಧಾನ, ಆಕ್ಷೇಪಣೆಗೆ ಲಿಂಕ್

ಶೇರ್ ಮಾಡಿ

ನೇಸರ ಎ.12: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮಾರ್ಚ್‌ /ಏಪ್ರಿಲ್ 2022 ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಸದರಿ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ವಿಷಯವಾರು ಕೀ ಉತ್ತರಗಳನ್ನು ಚೆಕ್‌ ಮಾಡಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಪ್ರಸ್ತುತ ಬಿಡುಗಡೆ ಮಾಡಲಾದ ಸರಿಯುತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ನೀಡಿದೆ. ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನೀಡಿ ಲಾಗಿನ್‌ ಆಗುವ ಮೂಲಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.
ಎಸ್‌ಎಸ್‌ಎಲ್‌ಸಿ ಸರಿಯುತ್ತರಗಳನ್ನು ಚೆಕ್‌ ಮಾಡುವ ವಿಧಾನ ಈ ಕೆಳಗಿನಂತೆ.

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ :  https://sslc.karnataka.gov.in/ ಗೆ ಭೇಟಿ ನೀಡಿ.

  • ಇಲ್ಲಿ ‘ಮಾರ್ಚ್‌/ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಉತ್ತರ ಕೀಲಿಗಾಗಿ ಇಲ್ಲಿ ಕ್ಲಿಕ್ ಮಾಡಿ’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
  • ನಂತರ ಓಪನ್ ಆದ ಪೇಜ್‌ನಲ್ಲಿ ವಿಷಯವಾರು ಮತ್ತು ಪ್ರಶ್ನೆ ಪತ್ರಿಕೆ ಆವೃತ್ತಿವಾರು ಕೀ ಉತ್ತರಗಳನ್ನು ಚೆಕ್‌ ಮಾಡಬಹುದು.
    ಪ್ರಥಮ ಭಾಷೆಗಳು, ದ್ವಿತೀಯ ಭಾಷೆಗಳು, ತೃತೀಯ ಭಾಷೆಗಳು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಜೆ.ಟಿ.ಎಸ್ ವಿಷಯಗಳು, ಪರ್ಯಾಯ ವಿಷಯಗಳು, ಎನ್‌.ಎಸ್‌.ಕ್ಯೂ.ಎಫ್‌ ವಿಷಯಗಳ ಪ್ರಶ್ನೆ ಪತ್ರಿಕೆ ಆವೃತ್ತಿವಾರು ಕೀ ಉತ್ತರಗಳನ್ನು ಚೆಕ್‌ ಮಾಡಬಹುದು.

ಕೀ ಉತ್ತರಗಳನ್ನು ಚೆಕ್‌ ಮಾಡಲು ಡೈರೆಕ್ಟ್ ಲಿಂಕ್‌ ಈ ಕೆಳಗಿನಂತೆ ಸಹ ನೀಡಲಾಗಿದೆ.

SSLC Exam 2022 Key Answers : https://bit.ly/3xjlzTp

ಎಸ್‌ಎಸ್‌ಎಲ್‌ಸಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಕೆ ಹೇಗೆ?
ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್‌: https://sslc.karnataka.gov.in/ ಗೆ ಭೇಟಿ ನೀಡಿ.
ಇಲ್ಲಿ ‘ ಮಾರ್ಚ್‌/ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಮಾದರಿ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.

ನಂತರ ಮಂಡಳಿಯ ಹೊಸ ಪುಟ ಓಪನ್‌ ಆಗುತ್ತದೆ.
ಇಲ್ಲಿ ವಿದ್ಯಾರ್ಥಿಗಳು ರಿಜಿಸ್ಟ್ರೇಷನ್‌ ನಂಬರ್ ನೀಡಬೇಕು.
ನಂತರ ಲಾಗಿನ್‌ ಆಗಬೇಕು. ಅಗತ್ಯ ಮಾಹಿತಿಗಳನ್ನು ನೀಡಿ ಸರಿಯುತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.

ಪ್ರಸ್ತುತ ಬಿಡುಗಡೆ ಮಾಡಲಾದ ಎಸ್‌ಎಸ್‌ಎಲ್‌ಸಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಡೈರೆಕ್ಟ್‌ ಲಿಂಕ್‌ ಅನ್ನು ಈ ಕೆಳಗಿನಂತೆ ನೀಡಲಾಗಿದೆ.
https://kseeb.karnataka.gov.in/objectionentry/

 

—ಜಾಹೀರಾತು—

Leave a Reply

error: Content is protected !!