ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ – ಮಹಿಳಾ ರತ್ನ ಪ್ರಶಸ್ತಿ 2022

ಶೇರ್ ಮಾಡಿ

ನೇಸರ ಎ15: ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಸಂಸ್ಥೆಯ ಬಹುಮುಖ ಪ್ರತಿಭೆ ಗಳಾದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಕುಮಾರಿ ಅರ್ಚನಾ ಎಸ್ ಸಂಪ್ಯಾಡಿ ಹಾಗೂ ರಾಜ್ಯಮಟ್ಟದ ಕನ್ನಡ ಶ್ರೀ ಪುರಸ್ಕೃತೆ ವಿಷ್ಣುಪ್ರಿಯ ಕೊಕ್ಕಡ ರವರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ 2022 ಗರಿ.
ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ)ಬೆಂಗಳೂರು ಇವರಿಂದ ದಿನಾಂಕ 28/4/2022 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪುರಸ್ಕಾರವನ್ನು ಪಡೆಯಲಿದ್ದಾರೆ. ರಮ್ಯಾ ಸುದರ್ಶನ್ ಹಾಗೂ ಸುದರ್ಶನ್ ಕುಮಾರ್ ಇವರ ಸುಪುತ್ರಿಯಾದ ಅರ್ಚನಾ ಎಸ್ ಸಂಪ್ಯಾಡಿ ಇವರು ಈಗಾಗಲೇ ಹಲವು ಪ್ರಶಸ್ತಿ ಪಾರಿತೋಷಕಗಳನ್ನು ಪಡೆದುಕೊಂಡಿದ್ದಾರೆ. ರಾಜ್ಯಮಟ್ಟದ ಚೈತನ್ಯಶ್ರೀ ಕರುನಾಡ ರತ್ನ ಪುರಸ್ಕಾರ, ಪ್ರತಿಭಾ ಚೇತನ ಪುರಸ್ಕಾರ, ಜನಸ್ಪಂದನ ಕಲಾ ಸಿರಿ ಪುರಸ್ಕಾರ, ಕನ್ನಡ ಶ್ರೀ ಪುರಸ್ಕಾರ, ಇಂಡಿಯನ್ ಎಕ್ಸಲೆಂಟ್ ಅವಾರ್ಡ್, ಬೆಸ್ಟ್ ಕ್ಲಾಸಿಕಲ್ ಡ್ಯಾನ್ಸರ್ ಅವಾರ್ಡ್, ನಟವಯ೯ ವರ್ಷದ ಕಲಾ ಸಾಧಕಿ ಪುರಸ್ಕಾರ, ಬೆಸ್ಟ್ ಡ್ಯಾನ್ಸರ್ ಬಿರುದು, ಕಲಾ ಮಾಣಿಕ್ಯ ಪುರಸ್ಕಾರ, ಶ್ರೀ ಮಂಜುನಾಥ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ ಇವರು ಬಿ.ಪಿ.ಪಿ.ಎಸ್ ಸ್ಕೂಲ್ ಉದನೆ ಇಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ರಾಜೀವ್ ಹಾಗೂ ದಿವ್ಯ ಇವರ ಸುಪುತ್ರಿಯಾದ ವಿಷ್ಣುಪ್ರಿಯ ಕೊಕ್ಕಡ ಇವರು ಹಲವು ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿ ಕೊಂಡ ಬಾಲಪ್ರತಿಭೆ ಕಲಾ ಮಾಣಿಕ್ಯ ಪುರಸ್ಕಾರ , ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ಪುರಸ್ಕಾರ, ಕನ್ನಡ ಶ್ರೀ ಪುರಸ್ಕಾರ ಪಡಕೊಂಡ ಇವರು ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಕೊಕ್ಕಡ ಇಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕುಶಾಲಪ್ಪ ಸಾರಥ್ಯದ ನಟವಯ೯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇಲ್ಲಿ ಅಕ್ಷಯ್ ಎಚ್ ಪುತ್ತೂರು, ಕಿರಣ್ ಮುರಲಿ ಪುತ್ತೂರು, ಸುಮಂತ್ ಆಚಾರ್ಯ ಪುಂಜಾಲಕಟ್ಟೆ, ಹಿಮಾ ತಿರುಮಲೇಶ್ ರವರಿಂದ ಕಥಕ್ ಹಾಗೂ ಪಾಶ್ಚಾತ್ಯ ನೃತ್ಯ ಕಲಿಯುತ್ತಿದ್ದಾರೆ.

—ಜಾಹೀರಾತು—

Leave a Reply

error: Content is protected !!