ಕಾಂಚನ: ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ದುಡಿದ ಶಕ್ತಿ: ಜೇಸಿ.ಮೋಹನ್ ಚಂದ್ರ

ಶೇರ್ ಮಾಡಿ

ನೇಸರ ಎ15: ಜೇಸಿ ಉಪ್ಪಿನಂಗಡಿ ಘಟಕದ ವತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ 131ನೇ ಜಯಂತಿಯನ್ನು ಬಜತ್ತೂರು ಗ್ರಾಮದ ಕಾಂಚನ ಬಿದಿರಾಡಿ ಕಾಲೋನಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ಜೇಸಿ JFM.ಮೋಹನ್ ಚಂದ್ರ ತೋಟದ ಮನೆ ವಹಿಸಿ, ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ದುಡಿದ ಶಕ್ತಿಯಾಗಿದ್ದರು. ಅವರು ಮಾನವ ಕುಲದ ಅಭ್ಯುದಯಕ್ಕೆ ಜೀವನವನ್ನೇ ಮುಡಿಪಾಗಿಟ್ಟರು. ಅವರ ಸಾಧನೆಗಳು ಬದುಕಿಗೆ ಪ್ರೇರಣೆಯಾಗಿದೆ ಎಂದರು. ಜೇಸಿ ಸದಸ್ಯರಾದ ಜೇಸಿ.ಪುನೀತ್ ಮಂಜಿಪಲ್ಲ ಮಾತನಾಡಿ ಡಾಕ್ಟರ್ ಅಂಬೇಡ್ಕರ್ ರ ಹುಟ್ಟುಹಬ್ಬ ಆಚರಣೆ ಮಾನವ ಸಮುದಾಯಕ್ಕೆ ಹೊಸ ಚೈತನ್ಯವನ್ನು ತಂದುಕೊಡುತ್ತದೆ ಎಂದರು. ಘಟಕದ ವರ್ಷದ ಶಾಶ್ವತ ಯೋಜನೆಯ ನಿರ್ದೇಶಕರಾದ ಜೇಸಿ.ಮಹೇಶ್ ಖಂಡಿಗ ಮಾತನಾಡಿ ಸರ್ವರ ಏಳಿಗೆಗೆ ಶ್ರಮಿಸಿದ ಧೀಮಂತ ನಾಯಕ ಎಂದರು. ಪ್ರಶಾಂತ್ ಬಿದಿರಾಡಿ ಅಂಬೇಡ್ಕರ ಗುಣಗಾನ ಮಾಡಿ ವಂದನಾರ್ಪಣೆಗೈದರು.

ಕಾರ್ಯಕ್ರಮದಲ್ಲಿ ಪೇರ್ನ, ಸಗುಣ, ದಿವಾಕರ, ಪಿಜಿನಾ, ರಮೇಶ್, ಯಲ್ಲಪ್ಪ, ನೋಣಯ್ಯ, ಗಿರಿಜಾ, ಆನಂದ ಸೇರಿದಂತೆ 25 ಮಿಕ್ಕಿ ಕಾಲೋನಿ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೇಸಿ ಸದಸ್ಯರಾದ ಜೇಸಿ.ಪುರುಷೋತ್ತಮ, ಪದ್ಮನಾಭ ಕಾರ್ಯಕ್ರಮಕ್ಕೆ ಸಹಕರಿಸಿದರು.

 

—ಜಾಹೀರಾತು—

Leave a Reply

error: Content is protected !!