ಹಿಂದೂ ಜಾಗರಣ ವೇದಿಕೆ, ಶಿವಾಜಿ ಗ್ರೂಪ್ ಆಪ್ ಬಾಯ್ಸ್ ಕೊಕ್ಕಡ ಘಟಕದ ವತಿಯಿಂದ “ಸಂಕ್ರಾಂತಿ ಟ್ರೋಪಿ- 2022”

ಶೇರ್ ಮಾಡಿ

ನೇಸರ ಎ.19: ಹಿಂದೂ ಜಾಗರಣ ವೇದಿಕೆ, ಶಿವಾಜಿ ಗ್ರೂಪ್ ಆಪ್ ಬಾಯ್ಸ್ ಕೊಕ್ಕಡ ಘಟಕ ಇದರ ಆಶ್ರಯದಲ್ಲಿ ಹಿಂದೂ ಬಾಂಧವರಿಗೆ ಕಾಂಕ್ರೀಟ್ ಪಿಚ್ ಮಾದರಿ ಅಂತರ್ ರಾಜ್ಯ ಮಟ್ಟದ ಬೃಹತ್ ಹೊನಲು ಬೆಳಕಿನ ಹಗ್ಗ-ಜಗ್ಗಾಟ “ಸಂಕ್ರಾಂತಿ ಟ್ರೋಪಿ- 2022” ಪಂದ್ಯಾಟ ಕೊಕ್ಕಡ ಸಂಕ್ರಾಂತಿ ಮೈದಾನದಲ್ಲಿ ಎ.17 ರಂದು ನಡೆಯಿತು.
ದೀಪ ಪ್ರಜ್ವಲಿಸುವ ಮೂಲಕ ಬಾಲಕೃಷ್ಣ ಕೆದಿಲಾಯ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಸಭಾಧ್ಯಕ್ಷತೆಯನ್ನು ವಿಶ್ವನಾಥ ಕೊಲ್ಲಾಜೆ ಉದ್ಯಮಿಗಳು ವಹಿಸಿ ಮಾತನಾಡಿ ಕ್ರೀಡೆಗಳನ್ನು ಆಯೋಜಿಸುವುದರಿಂದ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ, ಕ್ರೀಡಾಪಟುಗಳಿಗೆ ಸಹಾಯಕವಾಗುತ್ತದೆ ಅಲ್ಲದೆ ಊರಿನ ಜನಗಳಿಗೆ ಒಂದು ರೀತಿಯ ಜಾತ್ರಾ ವಾತಾವರಣ ಉಂಟಾದಂತೆ ಆಗುತ್ತದೆ ಎಂದರು ಹಾಗೂ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನರಸಿಂಹ ಮಾಣಿ ಕಾರ್ಯದರ್ಶಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಮಾತನಾಡಿ ಕ್ರೀಡಾಕೂಟವನ್ನು ಸಂಘಟಿಸುವುದರಿಂದ ಬಾಂಧವ್ಯ ಬೆಳೆಯುತ್ತದೆ, ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮನೋಭಾವ ವೃದ್ಧಿಯಾಗುತ್ತದೆ ಎಂದರು. ವೇದಿಕೆಯಲ್ಲಿ ಯೋಗೀಶ್ ಅಲಂಬಿಲ ಅಧ್ಯಕ್ಷರು ಗ್ರಾಮ ಪಂಚಾಯತ್ ಕೊಕ್ಕಡ, ತುಕ್ಕಪ್ಪ ಶೆಟ್ಟಿ ನೂಜೆ ಪ್ರಗತಿಪರ ಕೃಷಿಕರು, ಬಾಲಕೃಷ್ಣ ನೈಮಿಷ ಉದ್ಯಮಿಗಳು, ಲೋಕೇಶ್ ಫ್ರೆಂಡ್ಸ್ ಸುರತ್ಕಲ್ ತುಳುನಾಡು ಬಿರ್ವರ್ ಘಟಕದ ಸ್ಥಾಪಕಾಧ್ಯಕ್ಷರು, ಲಕ್ಷ್ಮೀನಾರಾಯಣ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಹರೀಶ್ ರಾವ್ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ ಕೊಕ್ಕಡ, ಅರವಿಂದ ಕುಡ್ವ ಮಿತ್ತಪಿತ್ತಿಲು ಮಾಜಿ ಅಧ್ಯಕ್ಷರು ಶ್ರೀಸದಾಶಿವೇಶ್ವರ ದೇವಸ್ಥಾನ ಕಳಂಜ, ವೆಂಕಟರಮಣ ಕಡಬ ಹಿಂದೂ ಜಾಗರಣ ವೇದಿಕೆ ಪುತ್ತೂರು, ಆರ್.ಜೆ ರಾಮಚಂದ್ರ ಮೇಸ್ತ್ರಿ ದುರ್ಗಾಪರಮೇಶ್ವರಿ ಕನ್ಸ್ಟ್ರಕ್ಷನ್ ಅಮ್ಮಾಜೆ, ಶ್ರೀಮತಿ ಪವಿತ್ರ ಗುರುಪ್ರಸಾದ್ ಉಪಾಧ್ಯಕ್ಷರು ಕೊಕ್ಕಡ ಗ್ರಾ.ಪಂಚಾಯತ್, ಶ್ರೀಮತಿ ಲತಾ ವೆಂಕಪ್ಪಗೌಡ, ತಿಮ್ಮಪ್ಪ ಪೂಜಾರಿ ಉದ್ಯಮಿಗಳು, ಪೂರ್ಣಾಕ್ಷ.ಬಿ ಅಧ್ಯಕ್ಷರು ಶಿವಾಜಿ ಗ್ರೂಪ್ ಆಪ್ ಬಾಯ್ಸ್ ಕೊಕ್ಕಡ, ಸಚಿನ್ ಕಾರ್ಯದರ್ಶಿ ಶಿವಾಜಿ ಗ್ರೂಪ್ ಆಪ್ ಬಾಯ್ಸ್ ಕೊಕ್ಕಡ ಉಪಸ್ಥಿತರಿದ್ದರು. ದೀಪಕ್ ನೆಲ್ಯಾಡಿ ಸ್ವಾಗತಿಸಿದರು, ಕಾರ್ಯದರ್ಶಿ ಸಚಿನ್ ವಂದಿಸಿದರು.

ಬಳಿಕ ನಡೆದ ಕ್ರೀಡಾಕೂಟದ ತೀರ್ಪುಗಾರರಾಗಿ ರಾಜೇಶ್ ಕಡಬ, ವಿನಯ್ ಕಾಶಿ ಕೊಕ್ಕಡ, ಅನಿಲ್ ಅಕ್ಕಪಾಡಿ ನೆರವೇರಿಸಿದರು. ಕ್ರೀಡಾಕೂಟದ ನಿರೂಪಣೆಯನ್ನು ಖ್ಯಾತ ಅಂತರ್ ರಾಜ್ಯ ಮಟ್ಟದ ನಿರೂಪಕ ಸುರೇಶ್ ಪಡಿಪಂಡ ಹಾಗೂ ದೀಪಕ್ ನೆಲ್ಯಾಡಿ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

—ಜಾಹೀರಾತು—

Leave a Reply

error: Content is protected !!