ನೇಸರ ಎ.25: ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ಈ ಹುದ್ದೆಗಳು 5 ವರ್ಷದ ಅವಧಿಗೆ ಒಳಪಟ್ಟಿವೆ.
35 ಗ್ರಾಮಲೆಕ್ಕಿಗ ಹುದ್ದೆಗಳ ಪೈಕಿ 33 ಹೊಸ ಹುದ್ದೆಗಳಾಗಿದ್ದು, 2 ಬ್ಯಾಕ್ಲಾಗ್ ಹುದ್ದೆಗಳಾಗಿವೆ. ಮಹಿಳಾ ಅಭ್ಯರ್ಥಿಗೆ 11 ಸ್ಥಾನ, ಗ್ರಾಮೀಣ ಅಭ್ಯರ್ಥಿಗೆ 10 ಸ್ಥಾನ, ಅಂಗವಿಕಲರಿಗೆ 1, ಮಾಜಿ ಸೈನಿಕರಿಗೆ 2, ಕನ್ನಡ ಮಾಧ್ಯಮ ಅಭ್ಯರ್ಥಿಗೆ 5, ಯೋಜನಾ ನಿರಾಶ್ರಿತರಿಗೆ 2 ಹಾಗೂ ತೃತೀಯ ಲಿಂಗಿಗಳಿಗೆ 1 ಸ್ಥಾನ ಮೀಸಲಿರಿಸಲಾಗಿದೆ. ಈ ಮೀಸಲಾತಿಗಳಲ್ಲಿ ಜಾತಿ ಮೀಸಲಾತಿಯನ್ನೂ ನಿಗದಿಪಡಿಸಲಾಗಿದೆ.
ಅರ್ಹತಾ ಷರತ್ತುಗಳು:
ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರುವ, ದೈಹಿಕ ನ್ಯೂನತೆಯಿಂದ ಮುಕ್ತರಾಗಿರುವ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರ ನಡೆಸುವ/ ಸರ್ಕಾರ ಅನುಮೋದಿತ ಏಜೆನ್ಸಿ ಅವರು ತೆಗೆದುಕೊಳ್ಳುವ ಕಂಪ್ಯೂಟರ್ ಲಿಟರಸಿ ಟೆಸ್ಟ್ನಲ್ಲಿ ಕನಿಷ್ಠ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ಪ್ರಮಾಣಪತ್ರವನ್ನು 3 ತಿಂಗಳ ಒಳಗಾಗಿ ಸಲ್ಲಿಸಬೇಕಿದೆ.
ವಿದ್ಯಾರ್ಹತೆ: ರಾಜ್ಯ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಇ/ ಐಸಿಎಸ್ಇ ದೆಹಲಿ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪಿಯುಸಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಎಂಎಸ್ ವರ್ಲ್ಡ್, ಎಕ್ಸೆಲ್, ಎಂಎಸ್ ಅಕ್ಸೆಸ್, ಪಿಪಿಟಿ ಸೇರಿದಂತೆ ಬೇಸಿಕ್ ಕಂಪ್ಯೂಟರ್ ಜ್ಞಾನ ಕೇಳಲಾಗಿದೆ.
ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 35 ವರ್ಷ, 2ಎ, 2ಬಿ, 3ಎ, 3ಬಿಗೆ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂಗವಿಕಲ, ವಿಧವಾ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷ ವಯೋಸಡಿಲಿಕೆ ಇದೆ.
ವೇತನ: ಮಾಸಿಕ 21,400- 42,000 ರೂ. ವೇತನ ನಿಗದಿಪಡಿಸಲಾಗಿದೆ.
ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 200 ರೂ. ಹಾಗೂ ಉಳಿದ ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಖಾತೆ ಸಂಖ್ಯೆ 40901632473, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಡಿಕೇರಿಗೆ ಆನ್ಲೈನ್/ ಚಲನ್ ಮೂಲಕ ಸಲ್ಲಿಸತಕ್ಕದ್ದು.
ನೇಮಕಾತಿ ಪ್ರಕ್ರಿಯೆ: ಮೆರಿಟ್ ಅಂಕ ಹಾಗೂ ಆಯಾ ಮೀಸಲಾತಿಗೆ ಅನ್ವಯವಾಗುವಂತೆ 1:5ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಈ ಅಭ್ಯರ್ಥಿಗಳು ಮೂಲ ದಾಖಲೆಗಳ ಸಹಿತ ದಾಖಲೆ ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು ಹಾಜರಾಗತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 19.5.2022
ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: 23.5.2022
ಅಂತಿಮ ಆಯ್ಕೆ ಪಟ್ಟಿ ಪ್ರಕಟ: 23.6.2022
ಮಾಹಿತಿಗೆ: http://kodagu.nic.in / http://[email protected] / 08272- 225811
—ಜಾಹೀರಾತು—