ನೇಸರ ಎ.28: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇದರ ದಶಮಾನೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ದಾಶರಥಿ ವಿದ್ಯಾಮಂದಿರದ ಎರಡನೇ ಹಂತದ ಮೊದಲ ಮಹಡಿಯ ಕೆಲಸ ಕಾಮಗಾರಿಗೆ ಮಹಾರಾಷ್ಟ್ರದ ಅತುಡೆ ಕಂಪೆನಿಯ ಪ್ರಾಜೆಕ್ಟ್ ಮೆನೇಜರ್ ಆನಂದ್ ರವರು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿನಿಧಿಗಳಾದ ಕೃಷ್ಣ ಶೆಟ್ಟಿ ಕಡಬ, ಶ್ರೀರಾಮ ಶಾಲೆಯ ಅಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿ ಬಾಲಕೃಷ್ಣ ಬಾಣಜಾಲು, ಸಮಿತಿಯ ಸದಸ್ಯರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥರಿದ್ದರು.
ಕುಮಾರಿ ಚಿನ್ಮಯಿ ಮತ್ತು ಭೂಮಿಕಾ ಪ್ರಾರ್ಥಿಸಿದರು. ರವಿಚಂದ್ರ ಹೊಸವಕ್ಲು ಸ್ವಾಗತಿಸಿದರು. ಸುಬ್ರಾಯ ಪುಣಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಬಾಣಜಾಲು ಧನ್ಯವಾದ ನೀಡಿದರು.
🔆 ಜಾಹೀರಾತು 🔆