ಬದುಕಿನ ಉನ್ನತಿಗಾಗಿ ಭಜನೆ: ಒಡಿಯೂರು ಶ್ರೀ

ಶೇರ್ ಮಾಡಿ

ನೇಸರ ಎ.30: ಭಜನೆಯಿಂದ ಭಕ್ತಿ ಜಾಗ್ರತವಾಗುತ್ತದೆ ಮತ್ತು ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಯುವ ಪೀಳಿಗೆಯಿಂದ ಧರ್ಮ ಜಾಗ್ರತಿಯಾಗಿ ದುಶ್ಚಟ ದೂರವಾಗುತ್ತದೆ. ಅದುದರಿಂದ ಎಳೆಯ ಮಕ್ಕಳೆಗೆ ಇಂತಹ ಕಾರ್ಯಕ್ರಮ ಅಭಿನಂದನೀಯ ಎಂದು ಒಡಿಯೂರು ಶ್ರೀಗಳು ನುಡಿದರು.

ಅವರು ಕಡಬ ತಾಲೂಕಿನ ಪಂಜದಲ್ಲಿ ನಡೆದ ಮಕ್ಕಳ ಭಜನಾ ತರಬೇತಿ ಸಮಾರೊಪ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳ ಭಜನಾ ಚಟುವಟಿಕೆಗಳನ್ನು ಗಮನಿಸಿದರು.
ಕಡಬ ತಾಲೂಕಿನ ಪಂಜ ಶಾರದಾಂಬಾ ಭಜನಾ ಮಂಡಳಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಒಂದು ವಾರ ಮಕ್ಕಳ ಭಜನಾ ತರಬೇತಿ ಕಾರ್ಯಕ್ರಮ ನಡೆದಿತ್ತು.
ಪುತ್ತೂರು, ಪಂಜ, ಎನೆಕಲ್ಲು ಮುಂತಾದ ಕಡೆಯಿಂದ ಸುಮಾರು 250 ಮಕ್ಕಳು ತರಬೇತಿ ಪಡೆದುಕೊಂಡಿದ್ದರು. ಧ್ಯಾನ, ಶ್ಲೋಕ, ಭಜನೆ, ಕುಣಿತ ಭಜನೆ, ಪ್ರಾರ್ಥನೆ ಮುಂತಾದ ತರಬೇತಿ ಕಾರ್ಯ ನಡೆದಿತ್ತು. ತರಬೇತಿಯನ್ನು ನಳಿನಿ ಆಚಾರ್ಯ, ರಮೇಶ, ವೆಂಕಟ್ರಮಣ, ಶ್ರೀಮತಿ ರಮ್ಯ ಮುಂತಾದವರು ನಡೆಸಿಕೊಟ್ಟರು.
ಸಮಾರೊಪ ಸಭೆಯಲ್ಲಿ ಭಜನಾ ಪರಿಷತ್ತು ರಾಜ್ಯ ಕಾರ್ಯದರ್ಶಿ ಬಿ.ಜಯರಾಮ ನೆಲ್ಲಿತ್ತಾಯ, ಸಂತೊಷ ಜಾಕೆ, ಸುಳ್ಯ ತಾಲೂಕು ಯೋಜನಾಧಿಕಾರಿ, ಕುಸುಮಾಧರ ಮುಂತಾದವರು ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿದ್ದರು.
ಭಜನಾ ಸಂಘಟಕರೂ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ರಾಜ್ಯ ಅದ್ಯಕ್ಷ ಬಾಲಕೃಷ್ಣ ಪಂಜ ಅವರನ್ನು ಸ್ವಾಮೀಜಿ ಅಭಿನಂಧಿಸಿದ್ದರು. ಕಾರ್ಯಕ್ರಮ ಸಮಾರೋಪದಲ್ಲಿ
ಮಕ್ಕಳ ಭಜನಾ ಪ್ರಾತ್ಯಕ್ಷಿಕೆ ನಡೆದಿತ್ತು.

ವೀಕ್ಷಿಸಿ SUBSCRIBERS ಮಾಡಿ

 

🔆 ಜಾಹೀರಾತು 🔆

Leave a Reply

error: Content is protected !!