ನೇಸರ ಮೇ 2: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವ ಸಮಿತಿ ಹೊಸ್ಮಠ ಬಲ್ಯ ಇದರ 25ನೇ ವರ್ಷದ ಬೆಳ್ಳಿಹಬ್ಬದ ಉತ್ಸವದ ನಿಮಿತ್ತ ಮೇ.2ರಂದು ಭಾನುವಾರ ಬಲ್ಯ ಗ್ರಾಮದ ಹೊಸ್ಮಠ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಕ್ರೀಡಾ ಹಬ್ಬ, ರಂಗ ಮಂದಿರ ಲೋಕಾರ್ಪಣೆ, ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ನಡೆದ ಕ್ರೀಡಾ ಹಬ್ಬದ ಉದ್ಘಾಟನೆಯನ್ನು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಬಲ್ಯದ ಗೌರವ ಸಲಹೆಗಾರ ದನಂಜಯ ಕೊಡಂಗೆ ನಡೆಸಿಕೊಟ್ಟರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ರವರು ನೂತನ ರಂಗಮಂದಿರ “ಬೆಳ್ಳಿಕೃಷ್ಣ” ಲೋಕಾರ್ಪಣೆ ಮಾಡಿ ಮಾತನಾಡುತ್ತಾ ಕಲಿಯುಗದಲ್ಲಿ ಸಂಘಟನಾ ಶಕ್ತಿ ಬಲಯುತವಾದದ್ದು, 1994 ರಲ್ಲಿ ನಾನು ಶಾಸಕನಾಗಿ ಬರಲು ನನಗೆ ಬೆಂಬಲ ನೀಡಿದ ಇಲ್ಲಿನ ಸಂಘಟನಾ ಶಕ್ತಿಯನ್ನು ನಾನು ಮರೆಯುವಂತಿಲ್ಲ, ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವಂತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಇಂತಹ ಸತ್ಕಾರ್ಯಗಳು ನಮ್ಮ ಜಡ ಬದುಕಿಗೆ ಪ್ರೇರಣೆ ನೀಡುವಂತಾಗಬೇಕು, ಧಾರ್ಮಿಕ ಮಹತ್ವವನ್ನು ಮಕ್ಕಳು ಮತ್ತು ಯುವಕರು ಅರಿತುಕೊಳ್ಳಬೇಕು, ಯುವ ಶಕ್ತಿ ಕ್ರಿಯಾಶೀಲವಾಗಲು ಇದು ಪ್ರೇರಣೆಯಗಲಿ. ನಾನು ಸಚಿವನಾದದ್ದು ನಿಮ್ಮೆಲ್ಲರ ಆಶೀರ್ವಾದದಿಂದ. ಮೀನುಗಾರಿಕಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ, ಗ್ರಾಮೀಣ ಭಾಗದಲ್ಲಿ ಸಿಗುವ ಕೆಲವೊಂದು ಮೀನುಗಳು ಆಯುರ್ವೇದ ಶಕ್ತಿಯನ್ನು ಹೊಂದಿರುವಂತಹದು. ಯುವ ಜನತೆ ಮೀನುಗಾರಿಕ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಉದ್ಯೋಗ ಸೃಷ್ಟಿಸಿ ಕೊಳ್ಳಬೇಕು ಎಂದರು.
ಬೆಳ್ಳಿ ಹಬ್ಬದ ನೆನಪಿನ ಸ್ಮರಣ ಸಂಚಿಕೆ “ಬೆಳ್ಳಿಕೃಷ್ಣ” ವನ್ನು ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಬಿಡುಗಡೆ ಗೊಳಿಸಿದರು. ಕೃಷ್ಣ ಲೀಲಾತಿತ ಮಾನವ, ಬೌದ್ದಿಕ ಬೆಳವಣಿಗೆ ನಮ್ಮನ್ನು ದೇವತ್ವದ ಕಡೆಗೆ ಕೊಂಡೊಯ್ಯುವಂತಹದು, ನಮ್ಮನ್ನು ಜಾಗ್ರತಗೊಳಿಸುವ ಇಂತಹ ಕಾರ್ಯಕ್ರಮಗಳು ಬೇಕಾಗಿದೆ. ಮುಂದಿನ ತಲೆಮಾರಿಗೆ ಪ್ರೇರಣೆ ನೀಡುವ ಸ್ಮರಣ ಸಂಚಿಕೆ ಗೌರವ ಸಂಪಾದಕನಾಗಿ ಬಿಡುಗಡೆ ಗೊಳಿಸುತ್ತಿರುವುದು ನನ್ನ ಸುಯೋಗ. ಎಲ್ಲರಿಗೂ ಧನ್ಯವಾದಗಳು, ಪ್ರೀತಿಯಿಂದ ಸ್ವೀಕರಿಸಿ ಎಂದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾದ ನಾರಾಯಣ.ಯಸ್ ಬಲ್ಯ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರವೀಂದ್ರ ಆರಿಗ ಪಡನ್ನೂರುಗುತ್ತು, ಕೃಷ್ಣಪ್ಪ ದೇವಾಡಿಗ ಸನಿಲ, ದೇವಯ್ಯ ಪನ್ಯಾಡಿ, ವೆಂಕಟ್ರಮಣ ಗೌಡ ದೇರಾಜೆ, ಜಗನ್ನಾಥ ಶೆಟ್ಟಿ ಗುಂಡಿಜಾಲು, ಭಾಸ್ಕರ ಸನಿಲ, ಶ್ರೀಮತಿ ದುರ್ಗಾವತಿ ದೇರಾಜೆ, ಶ್ರೀಮತಿ ರೇಷ್ಮಾ ಕಲ್ಲೇರಿ, ಶ್ರೀಮತಿ ಅನಿತಾ ಕೊಲ್ಲಿಮಾರು, ಕೃಷ್ಣಾ, ಯಂ.ಆರ್ ಹೊಸ್ಮಠ, ರೇಜಯ್ಯ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು
ಸನ್ಮಾನ:
25 ವರ್ಷಗಳಲ್ಲಿ ಅಧ್ಯಕ್ಷರಾಗಿ ದುಡಿದ ಪೂರ್ವಧ್ಯಕ್ಷರುಗಳನ್ನು, ಸ್ಥಾಪಕ ಸದಸ್ಯ ವೆಂಕಟರಮಣ ಗೌಡ ದೇರಾಜೆ, ಬೆಳ್ಳಿಹಬ್ಬಸಮಿತಿಯ ಅಧ್ಯಕ್ಷ ನಾರಾಯಣ ಎಸ್, ಬಲ್ಯ ಕೊಲ್ಲಿಮಾರು ದಂಪತಿಗಳನ್ನು ಸಚಿವರು ಸನ್ಮಾನಿಸಿದರು.
ಬೆಳಿಗ್ಗೆ ನಡೆದ ಕ್ರೀಡಾ ಹಬ್ಬದ ಬಹುಮಾನ ವಿತರಣೆಯನ್ನು ಡಾ.ಸುರೇಶ್ ಕುಮಾರ್ ಕೂಡೂರು ನಡೆಸಿ ಕೊಟ್ಟರು. ಬಲ್ಯ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ.ಕೆ ಕೊಲ್ಲಿಮಾರು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಮೋಹನ್ ಗೌಡ ದೇರಾಜೆ ಸ್ವಾಗತಿಸಿ, ಪೂರ್ಣೇಶ್ ಗೌಡ ಧನ್ಯವಾದ ಸಮಾರ್ಪಿಸಿ, ಶೇಖರ್ ಗೌಡ ಪನ್ಯಾಡಿ ನಿರೂಪಿಸಿದರು.
🔆 ಜಾಹೀರಾತು 🔆