ಶಿಕ್ಷಕಿ ಶ್ರೀಮತಿ ಜಯಂತಿ ಬಿ.ಎಂ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ

ಶೇರ್ ಮಾಡಿ

ನೇಸರ ಮೇ‌.3: ಸ.ಉ.ಹಿ.ಪ್ರಾ.ಶಾಲೆ ಕೊಣಾಲುನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಶ್ರೀಮತಿ ಜಯಂತಿ ಬಿ.ಎಂ. ಇವರು ಎ.30 ರಂದು ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿರುತ್ತಾರೆ.
ಇವರು ಪುತ್ತೂರು ತಾಲೂಕಿನ ಹೊಸಮಜಲು ಸ.ಹಿ.ಪ್ರಾ.ಶಾಲೆಗೆ ಪ್ರಥಮವಾಗಿ ಶಿಕ್ಷಕಿಯಾಗಿ ಜೀವನವನ್ನು ದಿನಾಂಕ 28-07-1994 ರಂದು ಆರಂಭಿಸಿ ಇಲ್ಲಿ 18 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ದಿನಾಂಕ 12-07-2012ರಂದು ಪುತ್ತೂರು ತಾಲೂಕಿನ ಸ.ಉ.ಹಿ.ಪ್ರಾ.ಶಾಲೆ ಕೊಣಾಲಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿರುತ್ತಾರೆ. ತದನಂತರ ದಿನಾಂಕ 08-11-2021 ರಿಂದ ದಿನಾಂಕ 31-01-2022ರ ವರೆಗೆ ಸ.ಹಿ.ಪ್ರಾ.ಶಾಲೆ ಪುಚ್ಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿರುತ್ತಾರೆ. ಬಳಿಕ 01–02-2022 ರಿಂದ ಕೊಣಾಲು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ದಿನಾಂಕ 30-04-2022 ರಂದು ಮಂಗಳೂರಿನಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಭಡ್ತಿ ಕೌನ್ಸಲಿಂಗ್ ನಲ್ಲಿ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಗೋಳಿತೊಟ್ಟು ಸ.ಉ.ಹಿ.ಪ್ರಾ.ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಮುಂದೆ ಸೇವೆ ಸಲ್ಲಿಸಲಿದ್ದಾರೆ.
ಇವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ನೆಲ್ಯಾಡಿ ಜೇಸಿಯ ಅಧ್ಯಕ್ಷರಾಗಿದ್ದಾರೆ.

💐 ಜಾಹೀರಾತು 💐

Leave a Reply

error: Content is protected !!