ನೇಸರ ಮೇ.07: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ವಾರ್ಷಿಕ ಜಾತ್ರೆಯು ಮೇ 2ರಿಂದ 9 ರವರೆಗೆ ನಡೆಯುತ್ತಿದ್ದು. ಆ ಪ್ರಯುಕ್ತ ಮೇ 6 ರಂದು ಬೆಳಿಗ್ಗೆ ಧನ್ವಂತರಿ ಯಾಗ ಜರುಗಿತು.
ನಂತರ ಶ್ರೀ ದೇವಳಕ್ಕೆ ವಾದ್ಯ ಘೋಷಗಳೊಂದಿಗೆ, ಪೂರ್ಣಕುಂಭ ಸ್ವಾಗತದ ಮೂಲಕ ನೂತನ ಕೊಡಿಮರದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಭಕ್ತಾದಿಗಳಿಂದ ಪಾನೀಯದ ವ್ಯವಸ್ಥೆ, ಪಟಾಕಿ ಸಿಡಿಸುವುದರೊಂದಿಗೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಸಾಗಿಬಂದರು.
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರು ಜೀವನಯೋಗ ಪ್ರತಿಷ್ಠಾನ ಸಂಸ್ಥಾಪಕ ಆಚಾರ್ಯ ಅರುಣ ಪ್ರಕಾಶ್, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಯಂ ರಾಧಾಕೃಷ್ಣ ಯಡಪಡಿತ್ತಾಯ, ಎಡಮನೆ ವೇ|ಮೂ|ವಿಷ್ಣುಪ್ರಸಾದ್ ತಂತ್ರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಧ್ವಜಸ್ಥಂಭ ದಾನಿ ಬೆಂಗಳೂರಿನ ನಾರಾಯಣ ಮೂರ್ತಿ ದಂಪತಿಗಳನ್ನು ಹಾಗೂ ಗಣೇಶ್ ಶಿಪ್ಪಿಂಗ್ ಲಾರಿಯಲ್ಲಿ ಚಾಲಕರಾಗಿ 317 ಧ್ವಜಸ್ಥಂಭಕ್ಕಾಗಿ ಕೊಡಿಮರಗಳನ್ನು ವಿವಿಧ ದೇವಸ್ಥಾನಗಳಿಗೆ ಯಶಸ್ವಿಯಾಗಿ ಸಾಗಿಸಿದ ದಿವಾಕರ ಪೂಜಾರಿ ಇವರನ್ನು ಗೌರವಿಸಲಾಯಿತು.
ದೀಕ್ಷಾ ಕೆ.ಎಸ್ ಪ್ರಾರ್ಥಿಸಿದರು, ದಾಮೋದರ ಅಜ್ಜಾವರ ಸ್ವಾಗತಿಸಿದರು, ಡಾ.ತಾರಾಗಣೇಶ ಧನ್ಯವಾದವಿತ್ತರು.
🌺 ಜಾಹೀರಾತು 🌺