ಧರ್ಭೇತಡ್ಕ ಶ್ರೀ ಕಾಲ ಕಾಮ ಪರಶುರಾಮ ದೇವರ ಮಂಟಪದ ಮೇಲ್ಭಾಗಕ್ಕೆ ಹಿತ್ತಾಳೆ ಕುಸುರಿ ಕೆತ್ತನೆಯ ಕವಚ, ಶ್ರೀ ದೇವರಿಗೆ ರಜತ ಕುಂಭ, ಗರ್ಭಗುಡಿಯ ದ್ವಾರಕ್ಕೆ ಹಿತ್ತಾಳೆ ಕುಸುರಿ ಕೆತ್ತನೆಯ ಕವಚ, ಭಕ್ತರ ದಾಹ ನಿವಾರಣೆಗೆ ಉದ ಕುಂಭ ಸಮರ್ಪಣೆ

ಶೇರ್ ಮಾಡಿ

ನೇಸರ ಮೇ‌.07: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಶ್ರೀ ಕಾಲ ಕಾಮ ಪರಶುರಾಮ ದೇವಸ್ಥಾನದ ಅಕ್ಷಯ್ಯ ತದಿಗೆ  ಕಾರ್ಯಕ್ರಮದ ಶುಭ ದಿನದಂದು ಶ್ರೀ ದೇವರ ಗರ್ಭ ಗುಡಿಯಲ್ಲಿರುವ ಮಂಟಪದ ಮೇಲ್ಭಾಗಕ್ಕೆ ಹಿತ್ತಾಳೆ ಕುಸುರಿಯುಳ್ಳ ಕವಚವನ್ನು ಮಾಳದ ಜಕಣ ಆರ್ಟ್ ಹೌಸ್ ನ ನವೀನ್ ಲೊಂಢೆಯವರು ಸೇವಾರೂಪದಲ್ಲಿ ಸಮರ್ಪಿಸಿರುತ್ತಾರೆ. ಶ್ರೀ ದೇವರಿಗೆ ರಜತ ಕುಂಭವನ್ನು ಗುಡ್ಡೇತೋಟದ ಮೋಹನ ತಾಮನ್ಕಾರ್ ಸೇವೆಯಾಗಿ ಸಮರ್ಪಿಸಿದ್ದಾರೆ. ಗರ್ಭ ಗುಡಿಯ ದ್ವಾರಕ್ಕೆ ಹಿತ್ತಾಳೆ ಕುಸುರಿ ಕೆತ್ತನೆಯ ಕವಚವನ್ನು ಮಹಾದೇವ ವಿ.ತಾಮನ್ಕಾರ್ ಸೇವಾ ರೂಪದಲ್ಲಿ ಸಮರ್ಪಿಸಿರುತ್ತಾರೆ.
ಭಕ್ತರ ದಾಹ ನಿವಾರಣೆಗಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಸಹಜ, ತಣ್ಣೀರು, ಬಿಸಿನೀರಿನ ವ್ಯವಸ್ಥೆಯನ್ನೊಳಗೊಂಡ ಉದಕುಂಭವನ್ನು ಹಿರಿಯರ ಸ್ಮರಣೆಗಾಗಿ ಆಸ್ಟ್ರೇಲಿಯಾದ ಪರ್ತ್ ನಗರದ ಶ್ರೀಧರ ಭಟ್ ಬೆಂಡೆ ಮತ್ತು ಪ್ರಜ್ಞಾ ಬೆಂಡೆ ಮತ್ತು ಮಕ್ಕಳು ಅವರ ಅಮ್ಮ ಸುಮನಾ ಚಂದ್ರಶೇಖರ ಬೆಂಡೆಯವರ ಉಪಸ್ಥಿತಿಯಲ್ಲಿ ಚಿತ್ಪಾವನಿ ಭಾಷೇಯ ಪುಸ್ತಕ ಸಂಪಾದಕರಾದ ಅಡ್ಡಹಳ್ಳ ಯೋಗೀಶ್ ದಾಮ್ಲೆಯವರು ಶುಧ್ಧೀಕೃತ ನೀರು ಹಂಚುವ ಮೂಲಕ ಉದ್ಘಾಟಿಸಿದರು. 
ಶ್ರೀ ದೇವರಿಗೆ ವಿಶೇಷ ಸೇವೆಗಳೊಂದಿಗೆ ಪವಮಾನ ಅಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ, ಬ್ರಾಹ್ಮಣ ಸಂತರ್ಪಣೆ ಗಳು ಭಕ್ತರ ಭಾಗವಹಿಸುವಿಕೆ ಯಲ್ಲಿ ಜರುಗಿತು. ಈ ಸಂದರ್ಭ ಆಡಳಿತ ಮಂಡಳಿಯ ಮೊಕ್ತೇಸರರ, ಅಧ್ಯಕ್ಷರ, ಸದಸ್ಯರ ಪಾಲುಗೊಳ್ಳುವಿಕೆಯಲ್ಲಿ ಸಾಂಗವಾಗಿ ಜರುಗಿತು.

🙏🏻 ಜಾಹೀರಾತು 🙏🏻

Leave a Reply

error: Content is protected !!