ನೇಸರ ಮೇ 16: ಪಂಚಶ್ರೀ ಆತಿಥ್ಯದಲ್ಲಿ ಬಹುಘಟಕ ತರಬೇತಿ ಕಾರ್ಯಾಗಾರ ದಿನಾಂಕ 15.05.2022 ರ ಆದಿತ್ಯವಾರ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿತು.
ಕಾರ್ಯಕ್ರಮವನ್ನು ಜೇಸಿಐ ಭಾರತದ ಪೂರ್ವ ನಿರ್ದೇಶಕರು ಆಗಿರುವ ಜೇಸಿ ಪಿಪಿಪಿ ಚಂದ್ರಶೇಖರ್ ನಾಯರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ 15ರ ಪ್ರಾಂತ್ಯ ಸಿ ಯ ಉಪಾಧ್ಯಕ್ಷರಾಗಿರುವ JFD ರವಿಚಂದ್ರ ಪಾಟಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷರಾಗಿರುವ ಗಣೇಶ್ ಪ್ರಸಾದ್ ನಾಯರ್ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ತರಬೇತುದಾರರಾಗಿರುವ ಜಯಪ್ರಕಾಶ್ ನಾಗತಿಹಳ್ಳಿ, ಮನೋಜ್ ಕಡಬ, ಜೇಸಿಐ ಪಂಜ ಪಂಚಶ್ರೀ ಯ ಅಧ್ಯಕ್ಷರಾಗಿರುವ JFM. ಶಿವಪ್ರಸಾದ್ ಹಾಲೆಮಜಲು ಹಾಗೂ ಕಾರ್ಯದರ್ಶಿ ಜೇಸಿ.ಕೌಶಿಕ್ ಕುಳ ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರರಾಗಿರುವ ಜಯಪ್ರಕಾಶ್ ನಾಗತಿಹಳ್ಳಿ ಹಾಗೂ ಸಹ ತರಬೇತುದಾರರಾಗಿರುವ ಮನೋಜ್ ಕಡಬ ತರಬೇತಿಯನ್ನು ಜೇಸಿ ಸದಸ್ಯರಿಗೆ ನೀಡಿದರು. ತರಬೇತಿಯಲ್ಲಿ ಪಂಜ, ಬೆಳ್ಳಾರೆ, ಸುಳ್ಯ, ಕಡಬ, ನೆಲ್ಯಾಡಿ, ಬೆಳ್ತಂಗಡಿ, ಸುಬ್ರಮಣ್ಯ ಜೇಸಿ ಘಟಕದ 50 ಕ್ಕಿಂತಲೂ ಹೆಚ್ಚು ಜೇಸಿ ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ವಲಯ 15ರ ವಲಯಾಧ್ಯಕ್ಷರು ಆಗಿರುವ ಜೇಸಿ SEN ರಾಯನ್ ಉದಯ ಕ್ರಾಸ್ತಾ, ವಲಯ 15ರ ವಲಯ ನಿರ್ದೇಶಕರು ಆಗಿರುವ JFD ಪುರುಷೋತ್ತಮ ಶೆಟ್ಟಿ ಹಾಗೂ ಪ್ರಾಂತ್ಯ ಬಿ ಯ ವಲಯ ಉಪಾಧ್ಯಕ್ಷರಾಗಿರುವ ಪ್ರಶಾಂತ್ ಲಾಯಿಲ ರವರು ಭೇಟಿ ನೀಡಿ ಕಾರ್ಯಕ್ರಮಕ್ಕೆ ಹಾಗೂ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಜೇಸಿಐ ಪಂಜ ಪಂಚಶ್ರೀ ಯ ಅಧ್ಯಕ್ಷರಾದ ಜೇಸಿ ಶಿವಪ್ರಸಾದ್ ಹಾಲೆಮಜಲು ಸ್ವಾಗತಿಸಿ ಕಾರ್ಯದರ್ಶಿ ಕೌಶಿಕ್ ಕುಳ ವಂದಿಸಿದರು.
🌸 ಜಾಹೀರಾತು 🌸