ನೇಸರ ನ 8: ದೇಶದ ಅಭಿವೃದ್ದಿಯಾಗ ಬೇಕಾದರೆ ಯುವ ಜನರ ಪಾತ್ರ ಪ್ರಮುಖವಾಗಿದೆ ಎಂದು ದ.ಕ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.
ಕಡಬ ತಾಲೂಕಿನ ಯುವಜನ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರದಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಡಾ.ಎಸ್ ಬಾಲಾಜಿ ವಹಿಸಿದ್ದರು.ನೂತನವಾಗಿ ಆರಂಭಗೊಂಡ ಕಡಬ ತಾಲೂಕು ಯುವಜನ ಒಕ್ಕೂಟ ಜಿಲ್ಲೆಯಲ್ಲೇ ಅತ್ಯುತ್ತಮ ಒಕ್ಕೂಟವಾಗಿ ಮೂಡಿಬರಲಿ ಎಂದು ಹಾರೈಸಿದರು.ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ರಾಜ್ಯ ಸಚಿವರಾದ ಎಸ್. ಅಂಗಾರ ಅವರು ನೆರವೇರಿಸಿದರು.
ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾಗಿರುವ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ. ಪ್ರತಿಜ್ಞಾವಿಧಿ ಭೋದನೆಯನ್ನು ಭೋದಿಸಿದರು. ಅತಿಥಿಗಳಾಗಿ ರಘುವೀರ್ ಸೂಟರ್ ಪೇಟೆ, ಕೃಷ್ಣಶೆಟ್ಟಿ ಕಡಬ, ರಾಕೇಶ್ ರೈ ಕೆಡೆಂಜಿ, ಸೀತಾರಾಮ ಗೌಡ ಪೊಸವಳಿಕೆ,ಪಿ.ಪಿ ವರ್ಗೀಸ್, ನಾಗರಾಜ್ ಎನ್.ಕೆ, ಮೇದಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕಡಬ ಯುವಜನ ಒಕ್ಕೂಟದ ಅಧ್ಯಕ್ಷರಾಗಿ ಶಿವಪ್ರಸಾದ್ ರೈ ಮೈಲೇರಿ ಪ್ರಮಾಣವಚನ ಸ್ವೀಕರಿಸಿದರು,ನೆಹರೂ ಯುವ ಕೇಂದ್ರದ ತಾಲೂಕು ಸಂಯೋಜಕಿ ಶ್ರೀರಕ್ಷಾ, ಕಡಬ ತಾಲೂಕು ಯುವಜನ ಒಕ್ಕೂಟದ ಸಂಚಾಲಕ ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಸಂಯೋಜಕ ದಕ್ಷತ್, ಜಸ್ವಂತ್ ಉಪಸ್ಥಿತರಿದ್ದರು. ಸಾಮಾಜಿಕ ಮುಂದಾಳು ಎ.ಪಿ.ಚೆರಿಯನ್, ತಾ.ಪಂ.ಮಾಜಿ ಸದಸ್ಯ ಗಣೇಶ್ ಕೈಕುರೆ ಶುಭ ಹಾರೈಸಿದರು.ಶಿಕ್ಷಕ ಗಣೇಶ್ ನಡುವಾಲ್ ನಿರೂಪಿಸಿದರು.ಕಡಬ ತಾಲೂಕು ಯುವಜನ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಖಾದರ್ ಶೇಡಿಗುಂಡಿ ವಂದಿಸಿದರು.