ಹೋಟೆಲ್ ಬಿರ್ವ ನೆಲ್ಯಾಡಿ ಶುಭಾರಂಭ

ಶೇರ್ ಮಾಡಿ

ನೇಸರ ನ8: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ, ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಸುಸಜ್ಜಿತವಾದ ಶುದ್ಧ ಸಸ್ಯಾಹಾರಿ ಅನ್ನಪೂರ್ಣ ರೆಸ್ಟೋರೆಂಟ್, ಮಾಂಸಾಹಾರಿ ಸಾಥಿ ಫ್ಯಾಮಿಲಿ ರೆಸ್ಟೋರೆಂಟ್, ಬಿರ್ವ ಲಾಡ್ಜ್ ಹಾಗೂ ಬಿರ್ವ ಆಡಿಟೋರಿಯಂ ಒಳಗೊಂಡ ಹೋಟೆಲ್ ಬಿರ್ವ ನೆಲ್ಯಾಡಿ ಇದರ ಶುಭಾರಂಭ ನ.8ರಂದು ನಡೆಯಿತು.
ದ್ವೀಪ ಪ್ರಜ್ವಲಿಸುವ ಮೂಲಕ ಶ್ರೀಸದ್ಗರು ಬ್ರಹ್ಮಾನಂದ ಸರಸ್ವತಿ ಮಹಾರಾಜ ಮಠಾಧೀಶರು, ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್,ನಿತ್ಯಾನಂದನಗರ,ಧರ್ಮಸ್ಥಳ ಉದ್ಘಾಟಿಸಿದರು. ಮುಖವೆಂಬುದು ಕನ್ನಡಿ ಇದ್ದಂತೆ, ಯಾರು ಸತ್ಯ,ಧರ್ಮ ಮೈಗೂಡಿಸಿಕೊಳ್ಳುತ್ತಾರೆ ಅವರಿಗೆ ದೇವರು ಹತ್ತಿರವಾಗುತ್ತಾನೆ, ಸಮಯ ಪ್ರಜ್ಞೆ ಇದ್ದರೆ ಏನೂ ಸಾಧಿಸಬಹುದು ಎಂದರು. ಮಾಲಕರಿಗೂ ಮತ್ತು ಎಲ್ಲರಿಗೂ ಆಶೀರ್ವಚನ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ(ಕಿಯೋನಿಕ್ಸ್)ದ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ನೆಲ್ಯಾಡಿ ಸಂತ ಅಲ್ಫೋನ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಬಿನೊಯಿ, ಹೊಸಮಜಲು ಅಲ್ ಮಸ್ಜಿದುಲ್ ಜಲಾಲಿಯ ಮಸೀದಿ ಧರ್ಮಗುರು ಅಲ್‌ಹಾಜಿ ಪಿ.ಉಮ್ಮರ್ ಕುಂಞಿ ಮುಸ್ಲಿಯಾರ್, ನೆಲ್ಯಾಡಿ ವರ್ತಕರ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಫೀಕ್ ಸೀಗಲ್,ನ್ಯಾಯವಾದಿ ಅಶ್ವಿನಿಕುಮಾರ್, ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು,ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ,ತಾ.ಪಂ.ಮಾಜಿ ಸದಸ್ಯೆಯರಾದ ಉಷಾ ಅಂಚನ್, ಕೆ.ಟಿ.ವಲ್ಸಮ್ಮರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಮಾಜಿ ಶಾಸಕ ರುಕ್ಮಯ ಪೂಜಾರಿ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ ದಿನೇಶ್ ಪೂಜಾರಿ, ಉಪಾಧ್ಯಕ್ಷೆ ಭವಾನಿ,ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಉಪ್ಪಿನಂಗಡಿಯ ಉದ್ಯಮಿ ಯು.ರಾಮ,ತುಂಗಪ್ಪ ಬಂಗೇರ, ಶೇಷಪ್ಪ ಕೋಟ್ಯಾನ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೋಟೆಲ್ ಬಿರ್ವ ನೆಲ್ಯಾಡಿ ಇದರ ಮಾಲಕರಾದ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಹಾಗೂ ವಸಂತಿ ಸಂಜೀವ ಪೂಜಾರಿಯವರು ಸ್ವಾಮೀಜಿಯವರಿಗೆ ಫಲ, ತಾಂಬೂಲ ಸಮರ್ಪಿಸಿದರು.
ಕಟ್ಟಡದ ಇಂಜಿನಿಯರ್‌ಗಳಾದ ರಾಜೇಶ್ ಪೂಜಾರಿ ಪರಂಗಿಪೇಟೆ, ಕಾರ್ತಿಕ್ ಪೂಜಾರಿ ಚೇಳೂರು,ರಫೀಕ್, ಮಹಮ್ಮದ್ ಯಾಸೀರ್, ಪದ್ಮನಾಭ ಪೂಜಾರಿಯವರನ್ನು ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಮಾಲಕ ಸಂಜೀವ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಹಾಸ ಪೂಜಾರಿ ಸ್ವಾಗತಿಸಿ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ವಂದಿಸಿದರು. ನೆಲ್ಯಾಡಿ ಸಂತಜಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಕಾರ್ಯಕ್ರಮ ನಿರೂಪಿಸಿದರು. ತನಿಷ್ಕಾ ಪ್ರಾರ್ಥಿಸಿದರು. ಶ್ರೀಮತಿ ಸೌಮ್ಯ ಚಂದ್ರಹಾಸ ಪೂಜಾರಿ, ಸಂತೋಷ್‌ಕುಮಾರ್ ಕುಚ್ಚಿಗುಡ್ಡೆ, ಸಂದೀಪ್‌ಕುಮಾರ್ ಕುಚ್ಚಿಗುಡ್ಡೆ, ಅಕ್ಷತಾ ಸಂತೋಷ್‌ಕುಮಾರ್, ಲಾವಣ್ಯ ಸಂದೀಪ್‌ಕುಮಾರ್‌ರವರು ಸಹಕರಿಸಿದರು. ಸಭೆಯಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

[foogallery id=”758″]

Leave a Reply

error: Content is protected !!