SSLC ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅನನ್ಯಗೆ ಜೇಸಿಐ ಕೊಕ್ಕಡ ಕಪಿಲಾದಿಂದ ಶೈಕ್ಷಣಿಕ ವೆಚ್ಚ

ಶೇರ್ ಮಾಡಿ

ನೇಸರ ಮೇ‌ 20: ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದ ಕಡುಬಡತನದ ಗ್ರಾಮೀಣ ಬಾಲಕಿ ಅನನ್ಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 624 ಅಂಕ ಗಳಿಸಿ, ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರತಿಭೆಯನ್ನು ಗುರುತಿಸಿ ಜೇಸಿಐ ಕೊಕ್ಕಡ ಕಪಿಲಾದ ವತಿಯಿಂದ ಇಂದು(ಮೇ.20) ಕಾಯರ್ತಡ್ಕ ಗಾಳಿತೋಟದ ಅನನ್ಯ ರವರ ಮನೆಯಲ್ಲಿ ಅವರ ಪೋಷಕರ ಸಮಕ್ಷಮದಲ್ಲಿ ಅಭಿನಂದಿಸಿ ಸಿಹಿ ಹಂಚಲಾಯಿತು.
ಈಕೆ ವಿಜ್ಞಾನ ವಿಭಾಗದಲ್ಲಿ ಪಿ ಯು ಸಿ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದಳು, ಜೇಸಿಐ ಕೊಕ್ಕಡ ಕಪಿಲಾ ಹಾಗೂ ದಾನಿಗಳ ನೆರವಿನಿಂದ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಜೇಸಿ ಅಧ್ಯಕ್ಷರಾದ ಶ್ರೀಧರ್ ರಾವ್ ರವರು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಅನನ್ಯ ರವರ ತಾಯಿ ಶಾಲಿನಿ, ಸಹೋದರ ಆಕಾಶ್ ವಿ.ಬಿ, ಜೋಸೆಫ್ ಪಿರೇರಾ, ಜಿತೇಶ್ ಎಲ್ ಪಿರೇರಾ, ಸಂತೋಷ ಜೈನ್, ಅಕ್ಷತ್ ರೈ, ಪಿ.ಟಿ. ಸೆಬಾಸ್ಟಿನ್, ಹರೀಶ್, ಜಾನ್ಸನ್ ಜೋಸೆಫ್ ಎ.ಜೆ. ನರಸಿಂಹ ನಾಯಕ್, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಘಟಕಾಧ್ಯಕ್ಷ ಶ್ರೀಧರ್ ರಾವ್ ಸ್ವಾಗತಿಸಿದರು, ಜಿತೇಶ್.ಪಿರೇರಾ ವಿದ್ಯಾರ್ಥಿನಿಯ ಪರಿಚಯ ಮಾಡಿದರು, ಪಿ.ಟಿ. ಸೆಬಾಸ್ಟಿನ್ ಊರವರ ಪರವಾಗಿ ಅಭಿನಂದನಾ ಭಾಷಣ ಮಾಡಿದರು, ಕಾರ್ಯದರ್ಶಿ ನರಸಿಂಹ ನಾಯಕ್ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!