- ♦ಹೈಲೈಟ್ಸ್:
2019-20 ರಲ್ಲಿ ದಾಖಲಾದ ಆಂಗ್ಲಮಾಧ್ಯಮದ ತರಗತಿಗೆ ಮಾನ್ಯತೆ ದೊರೆತಿಲ್ಲ
ಮಕ್ಕಳಿಗೆ ಪಠ್ಯಪುಸ್ತಕ ಸರಬರಾಜು ಆಗದೆ ಸಮಸ್ಯೆ ಬಗ್ಗೆ
ವಿದ್ಯಾರ್ಥಿಗಳಿಗೆ ಪೀಠೋಪಕರಣದ ಕೊರತೆ ಬಗ್ಗೆ
ಭೋಜನಾಲಯ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ 20 ಲಕ್ಷ ಒದಗಿಸಿಕೊಡುವ ಬಗ್ಗೆ
ಹೊಸ ಕಟ್ಟಡಗಳನ್ನು ನಿರ್ಮಿಸಿಕೊಡುವ ಬಗ್ಗೆ
ನೇಸರ ಮೇ.26: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ 2020- 21 ರಲ್ಲಿ ದತ್ತು ಪಡೆದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಆಲಂಕಾರು ಶಾಲೆಯಲ್ಲಿ ಸುಮಾರು 415 ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ಸಚಿವರಿಗೆ ಮನವಿ:
2019 -20 ನೇ ಸಾಲಿನಲ್ಲಿ ಊರಿನ ಹೆತ್ತವರ ಬೇಡಿಕೆಯಂತೆ ಪೋಷಕರ ಮತ್ತು ಎಸ್.ಡಿ.ಎಂ.ಸಿ ಯವರ ಮುತುವರ್ಜಿಯಲ್ಲಿ ಆಂಗ್ಲಮಾಧ್ಯಮದಲ್ಲಿ ಒಂದನೇ ತರಗತಿಯನ್ನು ಮಾನ್ಯ ಎಸ್ ಅಂಗಾರ ಅವರು ಉದ್ಘಾಟಿಸಿದರು. ಆದರೆ ಈ ಶಾಲೆಗೆ ಅಧಿಕೃತವಾಗಿ 2021-22 ನೇ ಸಾಲಿನಲ್ಲಿ 1ನೇ ಮತ್ತು 2ನೇ ಆಂಗ್ಲಮಾಧ್ಯಮ ತರಗತಿಗಳಿಗೆ ಮಾನ್ಯತೆ ಆದೇಶ ಲಭಿಸಿದೆ, 2019-20 ರಲ್ಲಿ ದಾಖಲಾದ ಆಂಗ್ಲಮಾಧ್ಯಮದ ತರಗತಿಗೆ ಮಾನ್ಯತೆ ದೊರೆತಿಲ್ಲ, ಇದರಿಂದ SATS ತಂತ್ರಾಂಶದಲ್ಲಿ ಮಕ್ಕಳ ಅಂಕಿ-ಅಂಶ ನಮೂದಿಸಲು ಸಾಧ್ಯವಾಗದೆ, ಮಕ್ಕಳಿಗೆ ಪಠ್ಯಪುಸ್ತಕ ಸರಬರಾಜು ಆಗದೆ ಸಮಸ್ಯೆಗಳಾಗಿವೆ. ಅಲ್ಲದೆ ಪ್ರಸ್ತುತವಾಗಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಆಂಗ್ಲಮಾಧ್ಯಮಕ್ಕೆ ಅಧಿಕೃತವಾಗಿ ಅನುಮೋದನೆ ಕೊಡಿಸಿ, ಪಠ್ಯಪುಸ್ತಕ ದೊರೆಯುವಂತೆ ಮಾಡಬೇಕಾಗಿದೆ.
ಶಾಲೆಯು ಆರಂಭಗೊಂಡು 100 ವರ್ಷಗಳು ಕಳೆದಿದ್ದು, ಕಳೆದ 2 ವರ್ಷಗಳ ಹಿಂದೆ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಪ್ರಸ್ತುತ ಈ ಶಾಲೆಯಲ್ಲಿ ಕೇವಲ 70 ವಿದ್ಯಾರ್ಥಿಗಳಿಗೆ ಆಗುವಷ್ಟು ಮಾತ್ರ ಪೀಠೋಪಕರಣಗಳು ವ್ಯವಸ್ಥೆಯಿದ್ದು, ಅವುಗಳು ಕೂಡ ತುಂಬಾ ಹಳೆಯದಾಗಿವೆ. ಉಳಿದ ವಿದ್ಯಾರ್ಥಿಗಳಿಗೆ ಪೀಠೋಪಕರಣದ ಕೊರತೆ ಇರುವುದರ ಬಗ್ಗೆ ಹಾಗೂ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಸಮರ್ಪಕವಾಗಿ ನಡೆಸಲು ಭೋಜನಾಲಯ ಅಗತ್ಯವಿದೆ. ಈ ಬಗ್ಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 32 ಲಕ್ಷಕ್ಕೆ ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಭೋಜನಾಲಯ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ 20 ಲಕ್ಷ ಒದಗಿಸಿಕೊಡುವ ಬಗ್ಗೆ, ಪ್ರಸ್ತುತ ಶಾಲೆಯಲ್ಲಿ 13 ತರಗತಿಗಳು ನಡೆಯುತ್ತಿದೆ. ಕೇವಲ 10 ಕೊಠಡಿಗಳಿದ್ದು. ಇರುವ ಕೆಲವು ಕೊಠಡಿಗಳು ಶಿಥಿಲಾವಸ್ಥೆಗೊಂಡಿದ್ದು ಮತ್ತು ಕೆಲವು ಉಳಿದ ಕೊಠಡಿಗಳು ದುರಸ್ತಿ ಹಂತದಲ್ಲಿವೆ. ಹೊಸ ಕಟ್ಟಡಗಳನ್ನು ನಿರ್ಮಿಸಿಕೊಡುವ ಬಗ್ಗೆ. ಮಾನ್ಯ ಸಚಿವರು ದತ್ತು ಪಡೆದ ಶಾಲೆ ಆಗಿರುವುದರಿಂದ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾದ ಲಿಂಗರಾಜು ಕೆ ಪಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಂ ದಯಾನಂದ, ಸದಸ್ಯರಾದ ನೋಣಯ್ಯ ಗೌಡ, ಶರವೂರು ದೇವಸ್ಥಾನದ ಮಾಜಿ ಅಧ್ಯಕ್ಷರಾದ ಪೂವಪ್ಪ ನಾಯ್ಕ, ಊರಿನ ಮುಖಂಡರಾದ ಪ್ರದೀಪ್ ಮನವಳಿಕೆ ಉಪಸ್ಥರಿದ್ದರು.
ಜಾಹೀರಾತು