ನೇಸರ ಮೇ.26: ಶಿಶಿಲ ಪರಿಸರದಲ್ಲಿ ಅತಿಯಾಗುತ್ತಿರುವ ನೀರು ನಾಯಿ ಹಾವಳಿ ಇದನ್ನು ಕಡಲ ಕರಡಿ ಅಥವಾ ಅಟರ್ ಎಂದೂ ಕರೆಯುತ್ತಾರೆ. ನದಿ, ಹಳ್ಳದ ಪಕ್ಕ ಬಂಡೆ ಪೊಟರೆಯಲ್ಲಿ ವಾಸಿಸುತ್ತದೆ. ನೀಳವಾದ ದೇಹ, ಚಪ್ಪಟೆ ತಲೆ, ಬಲವಾದ ಬಾಲ ಹುಟ್ಟುಗಳಂತಿರುವ ಪಾದ ಸೂಕ್ಷ್ಮ ಸ್ಪರ್ಶ, ಮೀಸೆ ಕೂದಲು ಇದರ ರೂಪ. ಮೀನು, ಕಪ್ಪೆ, ಮುಂತಾದವು ಇದರ ಆಹಾರ. ಸಣ್ಣ ಸಣ್ಣ ಮಕ್ಕಳಿಗೂ ಅಪಾಯ.
ಇಂತಹ ನೀರು ನಾಯಿ ಇದೀಗ ಶಿಶಿಲ ಪ್ರದೇಶದ ಕಪಿಲಾ ನದಿಯಲ್ಲಿ ಹಿಂಡು ಹಿಂಡಾಗಿ ಬರುತ್ತಿದೆ. ದೇವರ ಮೀನೆಂದೆ ಪ್ರಖ್ಯಾತವಾದ ಮತ್ಸ್ಯಗಳಿಗೂ ತೊಂದರೆ ಕೊಡುತ್ತಿದೆ. ಇದರಿಂದಾಗಿ ಗ್ರಾಮದ ಭಕ್ತಾದಿಗಳ ನಿದ್ದೆಗೆಡಿಸಿದೆ. ಸಂಜೆ ಹೊತ್ತಿನಲ್ಲಿ, ಮುಂಜಾವು ದೇವಾಲಯದ ಪರಿಸರದಲ್ಲು ಓಡಾಡುತ್ತಿದೆ.
ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೂ ದೂರು ನೀಡಲಾಗಿದ್ದು ಕೂಡಲೆ ಕ್ರಮ ಜರಗಿಸಿ ದೇವರ ಮೀನಿಗೆ ರಕ್ಷಣೆ ನೀಡುವಂತೆ ಗ್ರಾಮದ ಭಕ್ತಾಧಿಗಳು ಒತ್ತಾಯಿಸಿದ್ದಾರೆ.
ಜಾಹೀರಾತು