
ನೇಸರ ಮೇ.28: ಪ್ರತಿ ಏಕಾದಶಿಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆಯುವ “ಸ್ವಚ್ಛ ಮಂದಿರ ಸೇವಾ ಅಭಿಯಾನದ ಭಾಗವಾದ” ‘ಸ್ವಚ್ಛತಾ ಹರಿಕೆ ಸೇವೆ’ ದೇವಳದ ಸುತ್ತಮುತ್ತಲಿನಲ್ಲಿ ನಡೆಯಿತು.
ಪ್ರತಿ 15 ದಿವಸಗಳಿಗೊಮ್ಮೆ ಸ್ವಚ್ಛ ಕಾರ್ಯ ಆಗೋದರಿಂದ ಸುಮಾರು 7 ರಿಂದ 8 ಟನ್ ಸಿಗುತ್ತಿದ್ದ ಕಸವು ಇವಾಗ ಸುಮಾರು 3 ರಿಂದ 4 ಟನ್ ಇಳಿದಿರೋದು ನೋಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಕೂಡ ಸ್ವಚ್ಛ ಮಂದಿರ ಸೇವೆಯಲ್ಲಿ ಈ ಸಲ ಭಾಗಿಯಾದರು.

ದೇವಳದ ನೌಕರ ವೃಂದ, ದೇವಳದ ಆಡಳಿತಗೊಳಪಟ್ಟ ಶಿಕ್ಷಣ ಸಂಸ್ಥೆಗಳಾದ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗು ಉಪನ್ಯಾಸಕರು, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯರು, ಆಡಳಿತ ಮಂಡಳಿ, ಊರ ಮಹನೀಯರು ಹಾಗೂ ಸ್ಥಳೀಯ ವರ್ತಕರು ಜೋಡಣೆಯಾಗುವುದರೊಂದಿಗೆ ಸುಮಾರು 300ಕ್ಕೂ ಹೆಚ್ಚು ಭಕ್ತರು ಸೇವೆಯಲ್ಲಿ ಭಾಗಿಯಾಗಿದ್ದು ಸಾಂಗೋಪವಾಗಿ ನಡೆಯಿತು.
ಜಾಹೀರಾತು






