ನಿಡ್ಲೆ ಗ್ರಾ. ಪಂ ವ್ಯಾಪ್ತಿಯಲ್ಲಿ ಹೊರ ಗ್ರಾಮದವರಿಗೆ ಮೀನು ವ್ಯಾಪಾರಕ್ಕೆ ನೀಡಿದ ಅನುಮತಿಯನ್ನು ಹಿಂಪಡೆಯುವಂತೆ ಹಾಗೂ ಹೊರ ಗ್ರಾಮದವರು ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಗೂಡಂಗಡಿ ನಡೆಸುತ್ತಿರುವುದನ್ನು ತೆರವುಗೊಳಿಸುವಂತೆ ಮನವಿ

ಶೇರ್ ಮಾಡಿ

ನೇಸರ ಮೇ‌.28: ನಿಡ್ಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ಹೊರ ಗ್ರಾಮದ ವ್ಯಕ್ತಿಗಳಿಗೆ ಮೀನು ವ್ಯಾಪಾರಕ್ಕೆ ಅನುಮತಿ ನೀಡಿದನ್ನು ಹಿಂಪಡೆಯುವಂತೆ ಹಾಗೂ ರಸ್ತೆ ಬದಿಯಲ್ಲಿ ಬೇರೆ ಗ್ರಾಮದವರು ಅನಧಿಕೃತವಾಗಿ ಗೂಡಂಗಡಿ ನಡೆಸುತ್ತಿದ್ದು ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮೇ.27 ರಂದು ನಿಡ್ಲೆ ಗ್ರಾಮಸ್ಥರು ಗ್ರಾ.ಪಂಗೆ ಮನವಿಯನ್ನು ನೀಡಿದ್ದಾರೆ.
ರಹಿಮಾನ್ ಕೊಕ್ಕಡ ಹಾಗೂ ಶಾಫಿ ಎಂಬವರಿಗೆ ಮೀನು ಮಾರಾಟಕ್ಕೆ ಪರವಾನಿಗೆಯನ್ನು ನಿಡ್ಲೆ ಗ್ರಾ.ಪಂ ನೀಡಿದ್ದು ಅದನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಇನ್ನು ಮುಂದಕ್ಕೆ ಹೊರಗಿನ ಗ್ರಾಮಸ್ಥರಿಗೆ ಮೀನು ವ್ಯಾಪಾರಕ್ಕೆ ಪರವಾನಿಗೆಯನ್ನು ನೀಡಬಾರದೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಯಾವುದೇ ರೀತಿಯಾದ ಅಹಿತಕರ ಘಟನೆಗೆ ನಿಡ್ಲೆ ಗ್ರಾಮದಲ್ಲಿ ಅವಕಾಶ ನೀಡಬಾರದು ಹಾಗೂ ಹೊರ ಗ್ರಾಮದವರು ನಿಡ್ಲೆ ಗ್ರಾ.ಪಂ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರವನ್ನು ನಡೆಸುತ್ತಿದ್ದಾರೆ, ಇವರಿಂದ ಅಹಿತರ ಘಟನೆ ನಡೆಯುವ ಸಂಭವವಿರುತ್ತದೆ ಆದ್ದರಿಂದ 5 ದಿನದ ಒಳಗೆ ರಸ್ತೆ ಬದಿಯಿಂದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಇದಕ್ಕೆ ತಪ್ಪಿದ್ದಲ್ಲಿ ಮುಂದೆ ನಡೆಯುವ ತೊಂದರೆಗಳಿಗೆ ನೀವೇ ಜವಾಬ್ದಾರಿಯಾಗುತ್ತೀರಿ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ನಿಡ್ಲೆ ಗ್ರಾಮದ ಗ್ರಾಮಸ್ಥರು ಸಹಿ ಹಾಕಿ ಈ ಮನವಿಯನ್ನು‌ ಗ್ರಾ.ಪಂಗೆ ನೀಡಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!