ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜ್ ನಲ್ಲಿ ಬೀಳ್ಕೊಡುಗೆ, ನೂತನ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸ್ವಾಗತ

ಶೇರ್ ಮಾಡಿ

ನೇಸರ ಮೇ‌.28: ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜ್ ನ ಮಾರ್ ಇವಾನೋಯೋಸ್ ಸ್ಮಾರಕ ಸಭಾಂಗಣದಲ್ಲಿ ಮೇ.28 ರಂದು ಬೀಳ್ಕೊಡುಗೆ, ನೂತನ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.
ಬೆಥನಿ ಸಮೂಹ ಸಂಸ್ಥೆಗಳ ಸಂಚಾಲಕರಾದ ರೇ.ಫಾ.ಸತ್ಯನ್ ತೋಮಸ್ OIC ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಕಾಲೇಜ್ ನ ಪ್ರಾಂಶುಪಾಲರಾದ ತೋಮಸ್ ಬಿಜಿಲಿ OIC, ಮಾತನಾಡಿ ದೀಪ ಜ್ಞಾನದ ಬೆಳಕಿನ ಸಂಕೇತ, ಬೆಳಗಿದ ದೀಪದಂತೆ ಬೆಥನಿ ಬೆಳಗಲಿ. ಬೆಥನಿ ವಿದ್ಯಾಸಂಸ್ಥೆಯ ಯಶಸ್ವಿನ ಹಾದಿ ಶಿಕ್ಷಕ ವಿದ್ಯಾರ್ಥಿಗಳ ಪರಿಶ್ರಮ, ಸಂಘಟನಾತ್ಮಕವಾಗಿ ಬೆಥನಿ ಕುಟುಂಬದ ಸದಸ್ಯರಿಂದ ಸಂಸ್ಥೆಗೆ ದಕ್ಕಿದ ವಿಜಯದ ಬಗ್ಗೆ ಅಭಿನಂದಿಸಿದರು.
ಸಂಸ್ಥೆಗೆ ನೂತನವಾಗಿ ಸೇರ್ಪಡೆಗೊಂಡ ಶಿಕ್ಷಕರಾದ ಸಂಧ್ಯಾ ಪಿಳ್ಳೆ, ಲವೀನಾ, ಕ್ರಿಸ್ಟಲ್, ಅನು ಪ್ರಕಾಶ್, ಅಪೇಕ್ಷಾ, ಅಶ್ವಿನಿ, ಜಿಮ್ಸನ್ ಇವರ ಪರಿಚಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ ನಿರ್ವಹಿಸಿದರು.

ಸನ್ಮಾನ:
ಕರಾಟೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಲಿ, ಹಸಿರು, ಕಂದು ಹಾಗೂ ಕಪ್ಪು ಬಣ್ಣದ ಬೆಲ್ಟ್ ಗಳನ್ನು ನೀಡಲಾಯಿತು. ಕರಾಟೆಯಲ್ಲಿ ಅಪೂರ್ವ ಸಾಧನೆ ಮಾಡಿ ಕಪ್ಪು ಬೆಲ್ಟ್ ಪಡೆದ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕಿ ಅಲ್ಫೋನ್ಸ ರವರು ಬೆಲ್ಟ್ ತೊಡಿಸಿ ವಿಶೇಷವಾಗಿ ಸನ್ಮಾನಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೇ.ಫಾ.ಅಗಸ್ಟಿನ್ ರವರು ಬೆಥನಿ ಸಂಸ್ಥೆಯು ಒಗ್ಗಟ್ಟಿನ ಕೇಂದ್ರವಾಗಿ, ವಿದ್ಯೆಯ ಗಳಿಕೆಯ ಕಲಿಕೆಯ ಓಟಕ್ಕೆ ಜ್ಞಾನೋದಯ ಉತ್ತಮ ದೇಗುಲ. ಇಲ್ಲಿನ ಶಿಕ್ಷಕರ ಸಂಘಟನಾತ್ಮಕ ಪ್ರಯತ್ನ ಸಾಧನೆಗೆ ಕಾರಣವೆಂದು ನೆನಪಿಸಿದರು.

ಬೀಳ್ಕೊಡುಗೆ:
ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಸಂಚಾಲಕರಾದ ಸತ್ಯನ್ ತೋಮಸ್ OIC, ಇವರಿಗೆ ಗೌರವಪೂರ್ವಕವಾಗಿ ಸಂಸ್ಥೆಯ ಹಾಗೂ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪಗಳ ಜೊತೆಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿದ ಸಂಚಾಲಕರು ಮಾತನಾಡಿ ಸಂಸ್ಥೆಯ ಬಗ್ಗೆ ತಮ್ಮ ಅಭಿಮಾನ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಿ ಎಲ್ಲಾ ಮಕ್ಕಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ನೂತನ ಸಂಚಾಲಕರಾದ ರೇ.ಫಾ.ಮೆಲ್ವಿನ್ ಮ್ಯಾಥ್ಯು, ಕೋಶಾಧಿಕಾರಿಯಾದ ರೇ.ಫಾ.ಜೈಸನ್ ಸೈಮನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ಶಿಕ್ಷಕ ರಕ್ಷಕ ಉಪಾಧ್ಯಕ್ಷರಾದ ಎ.ಎ.ಅಬ್ರಾಹಂ, ಸದಸ್ಯರಾದ ಪ್ರಶಾಂತ್ ಸಿ ಎಚ್, ಸಂಸ್ಥೆಯ ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಂಜನಾ ರೆಜಿ ಕಾರ್ಯಕ್ರಮ ನಿರ್ವಹಿಸಿ, ಶರ್ವಿನ್ ಶಾಜಿ ಸ್ವಾಗತಿಸಿದರು, ಕುಮಾರಿ ಜೀನಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

 

Leave a Reply

error: Content is protected !!