ನೇಸರ ಮೇ.30: ಗೋಳಿತ್ತಟ್ಟು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಚುನಾವಣೆಯನ್ನು ಪ್ರಯೋಗಿಕವಾಗಿ ಮತದಾನದ ಎಲ್ಲಾ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ನಡೆಸಲಾಯಿತು.
ಮಾದರಿ ಮತಪತ್ರಗಳನ್ನು ಬಳಸಿ ಚುನಾವಣಾ ಪತ್ರಗಳನ್ನು ಬಳಸಿ ಮತದಾನ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ಆಧಾರ ಸ್ಥಂಭವಾದ ಸಾರ್ವಜನಿಕ ಚುನಾವಣಾ ಪ್ರಕ್ರಿಯೆಯ ಅರಿವನ್ನು ಪಡೆಯುವುದರೊಂದಿಗೆ ಶಾಲಾ ಸಂಸತ್ತಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಖುಷಿ ಪಟ್ಟರು. ಅತ್ಯಂತ ಹೆಚ್ಚು ಬಹುಮತವನ್ನು ಪಡೆದ 8ನೇ ತರಗತಿಯ ಹಫೀಝ ಶಾಲಾ ನಾಯಕಿಯಾಗಿ ಆಯ್ಕೆಯಾದಳು. ಉಪನಾಯಕಿಯಾಗಿ 7ನೇ ತರಗತಿಯ ಶಿಫಾನ, ರಕ್ಷಣಾ ಮಂತ್ರಿಯಾಗಿ ಹೃತಿಕ್, ಶಿಕ್ಷಣ ಮತ್ತು ಶಿಸ್ತು ಮಂತ್ರಿಯಾಗಿ ಮುಫೀದಾ, ಕ್ರೀಡಾ ಮಂತ್ರಿಯಾಗಿ ನವನೀತ್, ಸಾಂಸ್ಕೃತಿಕ ಮಂತ್ರಿಯಾಗಿ ಅಝ್ಮಿಯಾ, ಆರೋಗ್ಯ ಮಂತ್ರಿಯಾಗಿ ಸಿಫಾನ, ಸ್ವಚ್ಭತಾ ಮಂತ್ರಿಯಾಗಿ ಮುಹಮ್ಮದ್ ಸಾಧಿಕ್, ಗ್ರಂಥಾಲಯ ಮಂತ್ರಿಯಾಗಿ ಜೋಷ್ಮಾ, ನೀರಾವರಿ ಮತ್ತು ಕೃಷಿ ಮಂತ್ರಿಯಾಗಿ ಅಫ್ ನಾನ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಏಳನೇ ತರಗತಿಯ ಫಾರಿಸಭಾನು ಆಯ್ಕೆಯಾದರು. ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಜಯಂತಿ ಬಿ.ಎಂ. ಪ್ರಮಾಣವಚನ ಬೋಧಿಸಿ ನೂತನ ಸಂಸತ್ತಿಗೆ ಶುಭಹಾರೈಸಿದರು. ಶಾಲಾ ಸಂಸತ್ತಿನ ಚುನಾಣಾ ಪ್ರಕ್ರಿಯೆಯಲ್ಲಿ ಶಾಲಾ ಸಹ ಶಿಕ್ಷಕ ಅಬ್ದುಲ್ ಲತೀಫ್.ಸಿ, ದೈಹಿಕ ಶಿಕ್ಷಕರಾದ ಜೋನ್ ಕೆ.ಪಿ, ಸಹ ಶಿಕ್ಷಕಿಯರಾದ ಶ್ರೀಮತಿ ತೇಜಸ್ವಿ.ಕೆ, ಶ್ರೀಮತಿ ಸೀಮಾ ಹಾಗೂ ಶ್ರೀಮತಿ ಸಚಿತಾ ಹಾಗೂ ಶಾಲಾ ಅತಿಥಿ ಶಿಕ್ಷಕಿಯರು ಸೂಕ್ತ ಮಾರ್ಗದರ್ಶನ ನೀಡಿ ನೂತನವಾಗಿ ವಿದ್ಯಾರ್ಥಿ ನಾಯಕರ ಜವಾಬ್ದಾರಿಗಳನ್ನು ತಿಳಿಸಿದರು.
ಜಾಹೀರಾತು