ಲವ್ ಜಿಹಾದ್ ಪ್ರಕರಣ ಹಿನ್ನಲೆಯಲ್ಲಿ: ಹಿಂದೂಯೇತರರ ವಾಹನಕ್ಕೆ ನಿಷೇಧ ಹೇರಿ ಸೌತಡ್ಕದಲ್ಲಿ ಫ್ಲೆಕ್ಸ್ ಅಳವಡಿಕೆ

ಶೇರ್ ಮಾಡಿ

ನೇಸರ ಜೂ.03: ಕೊಕ್ಕಡದಲ್ಲಿ ಇತ್ತೀಚೆಗೆ ಆಟೋ ಚಾಲಕನ ಕೊಕ್ಕಡ ಸೌತಡ್ಕ ದೇವಸ್ಥಾ‌ನಕ್ಕೆ ತೆರಳುವ ರಸ್ತೆಯಲ್ಲಿ ಹಿಂದೂಯೇತರರ ಆಟೋ, ಟ್ಯಾಕ್ಸಿ ಇನ್ನಿತರ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಕಟೌಟ್ ಒಂದು ಅಳವಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೊಕ್ಕಡದ ಅನ್ಯಕೋಮಿನ ಯುವಕನೊಂದಿಗೆ ಯುವತಿಯ ಪ್ರೇಮಾಂಕುರ ವಿಷಯಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳು ಯುವಕನಿಗೆ ಎಚ್ಚರಿಕೆ ನೀಡಿದ ಘಟನೆ ನಡೆದ ಬೆನ್ನಲ್ಲೇ ಜೂ.3 ರಂದು ಈ ಕಟೌಟ್ ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದಿದೆ.
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂಜಾಗರಣ ವೇದಿಕೆ ಕೊಕ್ಕಡ ಪ್ರಕಟನೆ ಎಂದು ಬರೆದಿದ್ದು, ಬಳಿಕ ಹಿಂದೂ ಶ್ರದ್ಧಾ ಕೇಂದ್ರವಾದ ನಮ್ಮ ಊರಿನ ಪುಣ್ಯ ಕ್ಷೇತ್ರ ಸೌತಡ್ಕದಲ್ಲಿ ಅನ್ಯ ಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವುದರಿಂದ ಹಿಂದೂಯೇತರರ, ಆಟೋ ಮತ್ತು ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬರೆಯಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಟೌಟ್ ಫೋಟೋ ಹರಿದಾಡುತ್ತಿದ್ದು, ಕಟೌಟ್ ಅಳವಡಿಸಿರುವವರ ಕುರಿತು ಸಂಬಂಧ ಪಟ್ಟ ಪೊಲೀಸ್ ಇಲಾಖೆ ವಿಚಾರಣೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!