ನೇಸರ ಜೂ.02: ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು. ‘Comit to Quit’ or ತೊರೆಯಲು ಬದ್ದರಾಗಿರಿ ಎಂಬುದು ಘೋಷವಾಕ್ಯ. ಮೇ 31 ಮಂಗಳವಾರದಂದು ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಹತ್ತನೆ ತರಗತಿಯ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
ಕೆ.ಎಸ್.ಎಸ್ ಕಾಲೇಜಿನ ತ್ರಿತೀಯ ಬಿ.ಬಿ.ಎ ವಿದ್ಯಾರ್ಥಿಗಳು Commerce & Business Administration department ಜೊತೆಗೆ ನಿರ್ವಹಿಸಲಾಯಿತು.
ಕಾರ್ಯಕ್ರಮವು ಮೊದಲಿಗೆ ಪ್ರಾರ್ಥನೆಯಿಂದ ಪ್ರಾರಂಭಿಸಲಾಯಿತು. ಇದರಲ್ಲಿ ಪ್ರೌಢಶಾಲೆಯ ಮುಖ್ಯಗುರುಗಳಾದ ಯಶವಂತ ರೈ, ಸುರೇಶ್, ಶಾಲೆಯ ಹಿರಿಯ ಶಿಕ್ಷಕರಾದ ಕೃಷ್ಣ ಭಟ್ ಹಾಗೂ ಕೆ.ಎಸ್.ಎಸ್ ಕಾಲೇಜಿನ Department of Commerce and Businesses administration. ಅಧ್ಯಾಪಕರಾದ ಡಾ.ನೀತು ಸೂರಜ್ ಪಾಲ್ಗೊಂಡಿದ್ದರು. ಮುಖ್ಯಗುರುಗಳಾದ ಯಶವಂತ ರೈ ಅವರು ಮಾನವನು ಪ್ರಪಂಚದಲ್ಲಿರುವ 84 ಲಕ್ಷ ಜೀವರಾಶಿಗಳಲ್ಲಿರುವ ಬುದ್ಧಿಜೀವಿ ಎಂದು ಕರೆಯುತ್ತಾರೆ. ಆದರೆ ಅವನೇ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಾನೆ. ತಂಬಾಕಿನಿಂದ ಉಂಟಾಗುವ ತೊಂದರೆಗಳನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಬಳಿಕ ಕಾರ್ಯಕ್ರಮ PPT Presentation, short video and quiz ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮ ತಂಬಾಕು ವ್ಯಕ್ತಿಯ ಆರೋಗ್ಯಕ್ಕೆ ಹೇಗೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಅರ್ಥ ಮಾಡಿಸಲು ಸಹಕಾರಿಯಾಯಿತು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು, ಜೀವನ್, ಅನ್ವಿತ್, ದೀವನ್ ತಾಂತ್ರಿಕ ಸಹಾಯಕರಾಗಿ ಸಹಕರಿಸಿದರು, ಕವಿತಾ ವಂದಿಸಿದರು. ಅಕ್ಷತಾ, ಮಧುರಾ, ನಿಶಿತಾ, ನಿಶ್ಮಿತಾ, ರಿತೀಕ್ಷ, ರೂಪಶ್ರೀ, ಶರಣ್ಯ, ಶ್ರಾವ್ಯ, ಸುಶ್ಮಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಾಹೀರಾತು