ಗುಂಡ್ಯ: ಸಾರ್ವಜನಿಕ ಶೌಚಾಲಯ ಶುಚಿತ್ವದ ನೆಪದಲ್ಲಿ ಬೀಗ..!!

ಶೇರ್ ಮಾಡಿ

ನೇಸರ ಜೂ.08: ಬೆಂಗಳೂರು ಮಂಗಳೂರು ಧರ್ಮಸ್ಥಳ ಸುಬ್ರಮಣ್ಯ ಮುಂತಾದ ಕಡೆಗಳಿಂದ ಹೋಗುವ ಪ್ರಯಾಣಿಕರಿಗೆ ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ 75ರ ಜಂಕ್ಷನ್ ಬಳಿ ಸುಸಜ್ಜಿತ 7 ಶೌಚಾಲಯ ಹಾಗೂ 4 ಸ್ನಾನಗೃಹಗಳನ್ನು ಒಳಗೊಂಡ ಸುಸಜ್ಜಿತ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇದು ಸಾರ್ವಾಜನಿಕ ಬಳಕೆಗೆ ಮುಕ್ತವಾಗಿತ್ತು.

ಶೌಚಾಲಯದ ನಿರ್ವಹಣೆಯನ್ನು ಹಾಸನದ ಜನಸೇವಾ ಫೌಂಡೇಶನ್‌ನಿಗೆ ಒಪ್ಪಿಸಲಾಗಿತ್ತು. ನೆಲ್ಯಾಡಿಯಿಂದ ಮಾರನಹಳ್ಳಿ ವರೆಗೆ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಪ್ರಯಾಣಿಕರು ರಸ್ತೆಬದಿ ಅಥವಾ ಹೋಟೆಲ್ ಗಳನ್ನು ಅವಲಂಬಿ ಸುತ್ತಿದ್ದರು.
ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗುಂಡ್ಯ ಎಂಬಲ್ಲಿ ಸುಸಜ್ಜಿತ ರೀತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು.
ಸಾರ್ವಜನಿಕರಿಗೆ ನಿರ್ಮಿಸಿದ ಶೌಚಾಲಯ ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಬೀಗ ಜಡಿಯಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಕಟ್ಟಿದ ಈ ಶೌಚಾಲಯ ಇದ್ದರೂ ಇಲ್ಲದಂತಾಗಿರುವುದಕ್ಕೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಪಂಚಾಯಿತಿಯವರು ಕೂಡಲೇ ಗಮನ ಹರಿಸಿ ಸಾರ್ವಜನಿಕ ವ್ಯವಸ್ಥೆಗೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!