ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ

ಶೇರ್ ಮಾಡಿ

ನೇಸರ ಜೂ.08: 2021-22ನೇ ಶೈಕ್ಷಣಿಕ ವರ್ಷದ 10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 56 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 55 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಬ್ಬ ವಿದ್ಯಾರ್ಥಿ ಸಮಾಜ ವಿಜ್ಞಾನದಲ್ಲಿ ಅನುತ್ತೀರ್ಣರಾಗಿ ಶೇಕಡಾ 98.2% ಫಲಿತಾಂಶ ಬಂದಿತ್ತು. ಆದರೆ ಆ ವಿದ್ಯಾರ್ಥಿಗೆ ಮರುಮೌಲ್ಯಮಾಪನದಲ್ಲಿ ಸಮಾಜ ವಿಜ್ಞಾನದಲ್ಲಿ ಹೆಚ್ಚುವರಿ 10 ಅಂಕಗಳು ಲಭಿಸಿ 43 ಅಂಕ ಪಡೆದು ತೇರ್ಗಡೆಯಾಗಿರುತ್ತಾರೆ. ಹಾಗಾಗಿ ಶಾಲಾ ಫಲಿತಾಂಶ ಶೇಕಡಾ 100 ದಾಖಲಿಸಿದೆ.

ಫಲಿತಾಂಶ ತೃಪ್ತಿತಂದಿದೆ :
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 56 ವಿದ್ಯಾರ್ಥಿಗಳಲ್ಲಿ ಇದೀಗ 56 ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿದ್ದು ಸಂಸ್ಥೆಗೆ ಶೇಕಡ 100 ಫಲಿತಾಂಶ ಬಂದಿರುವುದು ಸಂತಸವಾಗಿದೆ. ನಮ್ಮ ಸಂಸ್ಥೆ ಸತತ 7ನೇ ವರ್ಷ 100% ಪಡೆದಿದೆ, ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೂ, ಶ್ರಮಿಸಿದ ಶಾಲಾ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಸಂಸ್ಥೆಯ ಪರವಾಗಿ ಧನ್ಯವಾದಗಳು.

                                                                                         -ಅಬ್ರಹಾಂ ವರ್ಗೀಸ್,
                                                                                                ಸಂಚಾಲಕರು, ಸಂತ ಜಾರ್ಜ್ ಶಿಕ್ಷಣ ಸಂಸ್ಥೆ ನೆಲ್ಯಾಡಿ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!