ಯಶೋವರ್ಮ ಪ್ರೇರಣಾ ಶಕ್ತಿಯಾಗಿದ್ದರು – ಪ್ರೊ.ಎನ್.ಜಿ ಪಟವರ್ಧನ್

ಶೇರ್ ಮಾಡಿ

ನೇಸರ ಜೂ.18: ಮಾನವೀಯ ಮೌಲ್ಯ ಹಾಗೂ ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ಡಾ.ಬಿ.ಯಶೋವರ್ಮ ಅವರು ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಸಲ್ಲಿಸಿರುವ ಸೇವೆ ಅಪಾರವಾದುದು, ಸಹೋದ್ಯೋಗಿಗಳ ಜತೆ ಅವರು ಹೊಂದಿದ್ದ ಸ್ನೇಹ ಭಾವ, ಹಿರಿಯರ ಮೇಲಿನ ಗೌರವ ಅವರ ವಿಶೇಷ ಗುಣವಾಗಿತ್ತು. ಅವರು ಎಲ್ಲಾ ರಂಗಗಳಲ್ಲೂ ಪ್ರೇರಣಾ ಶಕ್ತಿಯಾಗಿದ್ದರು ಎಂದು ಹಿರಿಯ ಸಾಹಿತಿ ಪ್ರೊ.ಎನ್.ಜಿ.ಪಟವರ್ಧನ್ ಹೇಳಿದರು
ಅವರು ಶನಿವಾರ ಉಜಿರೆಯ ಶ್ರೀ ಧ.ಮಂ.ಕಾಲೇಜಿನ,ಸಮ್ಯಗ್ದದರ್ಶನ ಸೆಮಿನಾರ್ ಹಾಲ್ ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಜರಗಿದ ಡಾ.ಬಿ.ಯಶೋವರ್ಮ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಹೇಳಿದರು.
ಕ.ಸಾ.ಪ.ಜಿಲ್ಲಾಧ್ಯಕ್ಷ ಎಂ.ಪಿ.ಶ್ರೀನಾಥ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಅಭಿಯಾನಗಳಿಗೆ ಅವರು ನೀಡಿರುವ ಮಾರ್ಗದರ್ಶನದಿಂದ ತೆರೆಯ ಮರೆಯಲ್ಲಿದ್ದ ಅನೇಕ ಪ್ರತಿಭೆಗಳು ಹೊರ ಹೊಮ್ಮಲು ಕಾರಣವಾಗಿದೆ. ಪ್ರತಿ ಸಮ್ಮೇಳನಗಳಲ್ಲಿ ಹೊಸತನಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಸಮಾರಂಭಗಳ ಮೆರಗು ಹೆಚ್ಚಿಸಲು ಶ್ರಮಿಸಿದವರು ಎಂದರು.

ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ ಆತ್ಮೀಯ ಮಾತುಗಳ ಮೂಲಕ ಉತ್ತಮ ಒಡನಾಟ ಹೊಂದಿದ್ದ ಅವರು ಉತ್ತಮ ಮಾರ್ಗದರ್ಶಕ ರಾಗಿದ್ದರು ಎಂದು ಹೇಳಿದರು.
ನಿವೃತ್ತ ಪ್ರಿನ್ಸಿಪಾಲ್ ಕೃಷ್ಣಪ್ಪ ಪೂಜಾರಿ ಮಾತನಾಡಿ ಅವರ ವೃತ್ತಿ ಧರ್ಮ ಹಾಗೂ ಪರೋಪಕಾರದ ಗುಣ ಎಲ್ಲರಿಗೆ ಅನುಕರಣೀಯ ಹಾಗೂ ಅನುಸರಣೀಯ, ಮರರೆಲಾಗದ ಹಾಗೂ ಮರೆಯಬಾರದ ವ್ಯಕ್ತಿಯಾಗಿ ರೂಪುಗೊಂಡವರು. ಘನತೆ, ಕಳಂಕ ರಹಿತ ಚಾರಿತ್ರ್ಯ, ಆಕರ್ಷಕ ವ್ಯಕ್ತಿತ್ವದ ಅವರ ಅಗಲಿಕೆ ಹಲವು ರಂಗಗಳಿಗೆ ತುಂಬಲಾರದ ನಷ್ಟ ಎಂದರು.
ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಮಾತನಾಡಿ ಯಶೋವರ್ಮ ಅವರು ಅಧ್ಯಯನ ಹಾಗೂ ವಿಮರ್ಶೆ ಮೂಲಕ ದಕ್ಷತೆಯಿಂದ ಕೆಲಸ ಮಾಡುವ ಚಾಕ ಚಕ್ಯತೆ ಹೊಂದಿದ್ದರು.ಕಾರ್ಯಕ್ರಮ ಸಂಯೋಜನೆ ಸಮಯ ಪಾಲನೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದರು.

ನಿವೃತ್ತ ಪ್ರಾಧ್ಯಾಪಕ ಎಸ್ ಡಿ ಶೆಟ್ಟಿ, ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ, ಪ್ರಿನ್ಸಿಪಾಲ್ ಪ್ರೊ.ಉದಯಚಂದ್ರ ಪಿ.ಎನ್,. ತಾಲೂಕು ಘಟಕದ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!