ನೇಸರ ಜೂ.20: ಗ್ರಾಮೀಣ ಜನತೆಯ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಆರಂಭಿಸಿರುವ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ವಿದ್ಯುತ್ ಅದಾಲತ್ ಗೋಳಿತೊಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 18ರಂದು ನಡೆಯಿತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ,
ಸಹಾಯಕ ಇಂಜಿನಿಯರ್ ರಾಜೇಶ್, ಸಹಾಯಕ ಲೆಕ್ಕಾಧಿಕಾರಿ ಸುಷ್ಮಾ, ಇಂಜಿನಿಯರ್ ಸವಿತಾ, ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ, ಪಿಡಿಒ ಜಗದೀಶ ನಾಯಕ್, ವಿದ್ಯುತ್ ಬಳಕೆದಾರರ ವೇದಿಕೆ ಅಧ್ಯಕ್ಷ ಸತೀಶ್ ಕೊಣಾಲುಗುತ್ತು ವೇದಿಕೆಯಲ್ಲಿದ್ದರು.
ಗೋಳಿತ್ತೊಟ್ಟು ಭಾಗದಲ್ಲಿ ಮೆಸ್ಕಾಂನ ಒಂದು ಕಚೇರಿಯನ್ನು ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈಗಾಗಲೇ ವಿದ್ಯುತ್ ಸಂಬಂಧಿತ ವ್ಯವಹಾರಗಳ ನಡೆಸಲು ಗೋಳಿತ್ತೊಟ್ಟು ಜನತೆ ಉಪ್ಪಿನಂಗಡಿಯನ್ನು ಅವಲಂಬಿಸಬೇಕಾಗಿದ್ದು, ಮುಂದಿನ ದಿನಗಳಲ್ಲಿ ಗೋಳಿತ್ತೊಟ್ಟುನಲ್ಲಿ ಕಚೇರಿ ಆರಂಭವಾದರೆ ಜೂನಿಯರ್ ಇಂಜಿನಿಯರ್ ಸಹಿತ 10 ಪವರ್ ಮ್ಯಾನ್ ಗಳು ಇಲ್ಲಿನ ಜನರ ಸೇವೆಗೆ ದೊರೆಯುತ್ತಾರೆ. ಹಾಗಾಗಿ ವಿದ್ಯುತ್ ಬಳಕೆದಾರರ ವೇದಿಕೆಯಿಂದ ಮನವಿ ನೀಡಲಾಯಿತು. ಈ ಬಗ್ಗೆ ಈಗಾಗಲೇ ಮನವಿ ಬಂದಿರುವುದಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದರು. ಹಳೆಯ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಅಳವಡಿಸುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭ ಕೊಚ್ಚಿಲದ ಕೆಎಸ್ ಎಸ್ ಎಫ್ ನ ಗೋಳಿತೊಟ್ಟು ವಿಭಾಗದಿಂದ, ಗೋಳಿತ್ತೊಟ್ಟು ಭಾಗದ ಪವರ್ ಮ್ಯಾನ್ ಗಳಿಗೆ ಅನುಕೂಲವಾಗುವಂತೆ ಇಪ್ಪತ್ತು ಅಡಿ ಉದ್ದದ ಏಣಿ ಮತ್ತು ಮರಗಳ ರೆಂಬೆ ಕಡಿಯಲು ಅನುಕೂಲವಾಗುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಪ್ರೂನರ್ ಸಲಕರಣೆಯನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಹಸ್ತಾಂತರಿಸಿದರು.
ನೆಲ್ಯಾಡಿ ಶಾಖಾ ಜೆಇ ರಮೇಶ್, ಪವರ್ ಮ್ಯಾನ್ ದುರ್ಗಸಿಂಹ ಸಹಕರಿಸಿದರು.
ಜಾಹೀರಾತು