ನೇಸರ ಜೂ.22: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಾಂಸ್ಕ್ರತಿಕ ಸಂಘ, ಪರಿಸರ, ವಿಜ್ಞಾನ, ಕ್ರೀಡಾ, ಆರೋಗ್ಯ ಮತ್ತು ನೈರ್ಮಲ್ಯ, ಮಾನವ ಸಂಪನ್ಮೂಲ ಸಂಘ ಹೀಗೆ ಶಾಲೆಯಲ್ಲಿ ಒಟ್ಟು ಎಂಟು ಸಂಘಗಳಿದ್ದು ಅದರ ಉದ್ಘಾಟನೆಯನ್ನು ಬೇರೆ ಬೇರೆ ಅತಿಥಿಗಳು ಒಂದೇ ವೇದಿಕೆಯಲ್ಲಿ ವಿಭಿನ್ನವಾಗಿ ಉದ್ಘಾಟಿಸಿದರು.
ಶಾಲಾ ಸಾಂಸ್ಕೃತಿಕ ಸಂಘವು ಶ್ರೀಮತಿ ಜಯ ಅವರು ವಿದ್ಯಾರ್ಥಿಗಳಿಗೆ ಗೆಜ್ಜೆಯನ್ನು ಹಸ್ತಾಂತರಿಸಿ ಬಳಿಕ ನೃತ್ಯ ಮಾಡುವ ಮುಖಾಂತರ ಉದ್ಘಾಟನೆ ಮಾಡಿದರು. ಅದರ ಕಾರ್ಯವೈಖರಿಯನ್ನು ಹಾಡು ಹಾಗೂ ಕುಂಚದಿಂದ ಪ್ರಚುರಪಡಿಸಿದರು. ನಂತರ ಮಾತನಾಡಿದ ಅವರು ಕಲೆ ಸಂಸ್ಕೃತಿಯನ್ನು ಉಳಿಸುವ ಶಾಲಾ ಕಾರ್ಯವನ್ನು ಶ್ಲಾಘಿಸಿದರು. ನಂತರ ಪರಿಸರ ಸಂಘವು ಪಂಚಾಯತ್ ಸದಸ್ಯರಾಗಿರುವ ಹರ್ಷಿತ್ ಅವರು ಬೀಜವನ್ನು ನೀಡುವುದರೊಂದಿಗೆ ಉದ್ಘಾಟನೆ ಮಾಡಿದರು. ಪರಿಸರದ ಕಾಳಜಿ ವಿದ್ಯಾರ್ಥಿಗಳು ಮೂಡಿಸಲು ಕಾರ್ಯಕ್ರಮಗಳನ್ನು ಹಾಕಿರುವುದನ್ನು ಶ್ಲಾಘಿಸಿದರು. ನಂತರ ಭಿತ್ತಿಪತ್ರಿಕೆಯ ಸಂಘವನ್ನು ಉದ್ಘಾಟಿಸಿದ ಬೆಳ್ತಂಗಡಿಯ ವಿಧಾನ ಪರಿಷತ್ ಸದಸ್ಯರಾಗಿರುವ ಪ್ರತಾಪ್ ಸಿಂಹ ನಾಯಕ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಹೇಳಿಕೊಟ್ಟು ಶುಭಹಾರೈಸಿದರು. ಮಾಡುವ ಕೆಲಸವನ್ನು ಪ್ರೀತಿಸಿ ಶಾಲೆಯ ಪಾಠವೇ ಇರಲಿ, ಅದು ಶಿಕ್ಷೆಯಲ್ಲ ಶಿಕ್ಷಣ ಎಂದು ತಿಳಿದು, ಒಳಗಿನ ಶಕ್ತಿಯನ್ನು ಜಾಗೃತಗೊಳಿಸಿ ಎಂದು ನುಡಿದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಲೆತು ನಕ್ಕು ನಗಿಸಿದರು. ನಂತರ ಶಾಲಾ ವಿಜ್ಞಾನ ಸಂಘವು ಪಿ.ಶ್ರೀನಿವಾಸ್ ಉದ್ಘಾಟಿಸಿದರು. ವಿಧ್ಯಾರ್ಥಿಗಳು ಪಿಪಿಟಿ ಹಾಗೂ ಕಿರು ಸಂವಾದದ ಮುಖಾಂತರ ಕಾರ್ಯವೈಖರಿಯನ್ನು ವಿವರಿಸಿದರು. ನಂತರ ಮಾತನಾಡಿದ ಅವರು ಶಾಲಾ ಕಾರ್ಯವೈಖರಿಯನ್ನು ಮನಸಾರೆ ಹೊಗಳಿ ಶುಭಹಾರೈಸಿದರು.
ಮುಂದೆ ಶಾಲಾ ಕ್ರೀಡಾ ಸಂಘ ಶಾಲಾ ಸಂಚಾಲಕರಾದ ರವಿಕುಮಾರ್ ಅವರು ಚೆಸ್ ಆಡುವ ಮುಖಾಂತರ ಉದ್ಘಾಟನೆ ಮಾಡಿದರು. ಇದರ ಕಾರ್ಯ ವೈಖರಿಯನ್ನು ವಿಧ್ಯಾರ್ಥಿಗಳ ಕಿರುಪ್ರಹಸನದ ಮುಖಾಂತರ ನಡೆಸಿಕೊಟ್ಟರು. ನಂತರ ಮಾತನಾಡಿದ ಅವರು ಶಾಲಾ ಕ್ರೀಡಾ ಸಂಘದ ಮುಂದಿನ ನಡೆಯ ಕುರಿತು ಹರ್ಷವ್ಯಕ್ತ ಪಡಿಸಿದರು ಹಾಗೂ ಆಟದ ಮಹತ್ವ ವಿವರಿಸಿದರು.
ಮೈಮ್ ಶೋ ಮುಖಾಂತರ ಶಾಲಾ ಮಾನವಸಂಪನ್ಮೂಲ ಸಂಘದ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ವಿವರಿಸಿದರು. ಶಾಲಾ ವಿದ್ಯಾರ್ಥಿ ಸಂಘದ ನಾಯಕಿಗೆ ಮಾನವ ಸಂಘದ ಬ್ಯಾಡ್ಜ್ ನೀಡುವ ಮುಖಾಂತರ ಅನಂತ ಪದ್ಮನಾಭ ಭಟ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಪಿಪಿಟಿ ಪ್ರಸ್ತುತಿ ಮುಖಾಂತರ ಆರೋಗ್ಯ ಮತ್ತು ನೈರ್ಮಲ್ಯದ ಕಾರ್ಯವೈಖರಿಯನ್ನು ಪ್ರಸ್ತುತ ಪಡಿಸಿದರು. ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಮುಖಾಂತರ ರಾಮಚಂದ್ರ ಭಟ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆರೋಗ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿ ಶುಭಹಾರೈಸಿದರು.
ಶಾಲಾ ಓದುಗರ ಸಂಘ ಸಂಘದ ಕಾರ್ಯವೈಖರಿಯ ಪುಸ್ತಕ ತೆರೆಯುವುದರ ಮುಖಾಂತರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರ ಪ್ರೋತ್ಸಾಹದ ಹಸ್ತದೊಂದಿಗೆ ಉದ್ಘಾಟನೆಗೊಂಡಿತು. ನಂತರ ಮಾತನಾಡಿದ ಓದಿನ ಮಹತ್ವದ ಕುರಿತು ಮಾತನಾಡಿ ಶುಭಹಾರೈಸಿದರು. ಶಾಲೆ ಸುಂದರ ಅಡವಿಯಂತೆ ಕಂಗಳೊಸುತ್ತಿತ್ತು. ಕಾರ್ಯಕ್ರಮ ಅಡವಿಯ ಕಾಡಿನ ರಾಜನ ಆಸ್ಥಾನದಿಂದ ಪ್ರಾರಂಭ ಗೊಂಡಿತು. ನಾಟಕದ ಮುಖಾಂತರ ಆರಂಭಗೊಂಡ ಕಾರ್ಯಕ್ರಮ ನಾಟಕದಿಂದಲೇ ಕೊನೆಗೊಂಡು ಸ್ವಾಗತ ವಂದನಾರ್ಪಣೆಯೂ ಅದರಲ್ಲೆ ಮುಗಿದಿತ್ತು. ನೃತ್ಯ ಗಾನ ಕುಂಚಗಳ ನರ್ತನವಿತ್ತು. ಒಟ್ಟಿನಲ್ಲಿ ಶಾಲೆಯಲ್ಲಿ ಹಬ್ಬದ ವಾತಾವರಣವಿತ್ತು. ನವಿಲ ರಂಗೋಲಿ ಕೈ ಬೀಸಿ ಕರೆಯುತ್ತಿತ್ತು. ಸ್ವಾಗತದ್ವಾರ ಹಸ್ನನ್ಮುಖದಿಂದ ಸ್ವಾಗತಿಸುತ್ತಿತ್ತು. ಶಾಲಾ ಶಿಕ್ಷಕವೃಂದ ಕಾರ್ಯಕ್ರಮದ ಯಶಸ್ಸಿನ ಸಂತೃಪ್ತಿ ಯಿಂದ ನಗುತ್ತಿದ್ದರು. ವಿದ್ಯಾರ್ಥಿಗಳು ಮುಂದಿನ ಕಾರ್ಯಗಳ ಕನಸು ಕಾಣುತ್ತಾ ಕಾರ್ಯಕ್ರಮ ಕೊನೆಗೊಂಡು ಮುಂದಿನ ಯೋಜನೆಗಳಿಗೆ ಮುನ್ನುಡಿ ಬರೆಯಿತು.