
ನೇಸರ ಜೂ.22: ಪಡುಬೆಟ್ಟು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಕ್ಕಳಿಂದ ಸೂರ್ಯ ನಮಸ್ಕಾರ ಹಾಗೂ ವಿವಿಧ ಬಗೆಯಆಸನಗಳನ್ನು ಮಾಡಿಸಲಾಯಿತು. ಮುಖ್ಯ ಗುರುಗಳಾದ ಶ್ರೀಮತಿ ಜೆಸ್ಸಿ ಕೆ.ಎ. ಇವರ ನೇತೃತ್ವದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಲೀಲಾವತಿ ಎಂ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಹಶಿಕ್ಷಕಿ ಕಮಲಾಕ್ಷಿ ಕೆ ಇವರು ಯೋಗದ ಮಹತ್ವ ತಿಳಿಸಿದರು ಜೊತೆಗೆ ಯೋಗ ದಿನಾಚರಣೆಯ ಪ್ರತಿಜ್ಞೆ ವಿದ್ಯಾರ್ಥಿಗಳಿಗೆ ವಾಚಿಸಿದರು.
ಸಹ ಶಿಕ್ಷಕಿಯರಾದ ಶ್ರೀಮತಿ ಸಜಿನ ಕೆ. ಎರೋಡಿ, ಕವಿತಾ ಡಿ., ಮಮತಾ ಸಿ.ಹೆಚ್. ಅತಿಥಿ ಶಿಕ್ಷಕಿಯರಾದ ಶ್ರೀಮತಿ ನ್ಯಾನ್ಸಿ ಲಿಝಿ, ಶ್ರೀಮತಿ ರಂಜಿನಿ ಕುಂದರ್, ಶ್ರೀಮತಿ ತೀರ್ಥ ಪಿ.ವಿ. ಸಹಕಾರ ನೀಡಿದರು.





