ನೇಸರ ಜೂ.24: ಬೆಳ್ತಂಗಡಿ ನಗರದ ಮನೆಯೊಂದರ ನವೀಕರಣದ ಸಮಯ ಸಿಕ್ಕಿದ 15 ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿದ್ದು ಇದರಲ್ಲಿ 13 ಮರಿಗಳು ಹೊರಬಂದಿದ್ದು ಅವುಗಳನ್ನು ಸಂರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.
ಮನೆ ನವೀಕರಣದ ವೇಳೆ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡ ಕಾರ್ಮಿಕರು ಹೌಹಾರಿದರು. ಈ ಸಮಯ ಮನೆಮಂದಿ ರಕ್ಷಕ ಉಜಿರೆಯ ಸ್ನೇಕ್ ಜಾಯ್ ಅವರಿಗೆ ಕರೆ ಮಾಡಿದ್ದಾರೆ.
ಹೆಬ್ಬಾವನ್ನು ಹಿಡಿದ ಅವರಿಗೆ ಅದರ ಜತೆ 15 ಮೊಟ್ಟೆಗಳು ಕಂಡುಬಂದಿದ್ದವು. ಆ ಮೊಟ್ಟೆಗಳಿಗೆ ಶಿಷ್ಯರಾದ ಸ್ನೇಕ್ ಅಶೋಕ್ ಲಾಯಿಲ, ಸ್ನೇಕ್ ಲಿಂಗರಾಜು ಉಜಿರೆ ಅವರ ಸಹಕಾರದಲ್ಲಿ ಕಾವು ನೀಡುವ ವ್ಯವಸ್ಥೆಯನ್ನು ಮಾಡಿದರು. ಬಳಿಕ ಜನಿಸಿದ 13 ಮರಿಗಳ ಇವನು ಪರಿಶೀಲಿಸಿ ಅರಣ್ಯಕ್ಕೆ ಬಿಡಲಾಯಿತು.