ನೇಸರ ಜೂ.25: ಅರುಣಾಚಲ ಪ್ರದೇಶದ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ,ಗ್ರಾಮ ಪಂಚಾಯತಿ ಹಾಗೂ ಅಧಿಕಾರಿ ವರ್ಗದ30 ಜನರ ತಂಡ ಉಜಿರೆ ಗ್ರಾಮ ಪಂಚಾಯಿತಿಗೆ ಜೂ.23 ರಂದು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.
ಉಜಿರೆಯಲ್ಲಿರುವ ಕಸ ವಿಲೇವಾರಿ ಘಟಕ ಹಾಗೂ ಕಸವನ್ನು ಯಂತ್ರಗಳ ಮೂಲಕ ಮರು ಬಳಕೆ ಮಾಡಿ ಅದರಿಂದ ನಾನಿ ರೀತಿಯ ಆದಾಯ ಪಡೆಯುವಂತಹ ವ್ಯವಸ್ಥಿತ ರೀತಿಯ ಕಸ ವಿಲೇವಾರಿ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲೆಡೆ ಪ್ರವಾಸ ಕೈಗೊಂಡಿರು ತಂಡ ಉಜಿರೆ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿದೆ.ಈ ಅಧ್ಯಯನ ತಂಡ ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಸಂಸ್ಥೆಗಳ ಯೋಜನೆ ರೂಪಣೆ ಮತ್ತು ಮೇಲ್ವಿಚಾರಣೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಟಾನ, ವಿನೂತನ ಚಟುವಟಿಕೆಗಳು, ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ಧೇಶದಿಂದ ಪ್ರವಾಸ ಕೈಗೊಂಡಿದೆ. ಉಜಿರೆ ಪಂಚಾಯಿತಿಗೆ ಆಗಮಿಸಿದ ತಂಡ ಜಿ.ಪಿ.ಡಿ.ಪಿ,ಸ್ಥಾಯಿ ಸಮಿತಿ,ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚೆ ನಡೆಸಿತು.
ಜಿ.ಪಂ.ಯೋಜನಾ ನಿರ್ದೇಶಕ ಹಾಲ ಸಿದ್ಧಪ್ಪ ಪೂಜಾರಿ, ತಾ.ಪಂ.ಇ.ಒ. ಕುಸುಮಾಧರ, ಮೈಸೂರಿನ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯ ಮುಖ್ಯ ಬೋಧಕರಾದ ಮಲ್ಲಿಕಾರ್ಜುನ,ಪ್ರಕಾಶ್, ಲಕ್ಷ್ಮಿ,ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಸದಸ್ಯರು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಯಂತ್ ಯು.ಬಿ.ವಂದಿಸಿದರು.