ರಿಲಾಯನ್ಸ್ ಜಿಯೋ ಸಂಸ್ಥೆ ಗಣೇಶ ಚತುರ್ಥಿ ದಿನದಂದು ಜಿಯೋ ಏರ್ಫೈಬರ್ ಸೇವೆಯನ್ನು ಅನಾವರಣಗೊಳಿಸಿದೆ. ಸದ್ಯ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಜಿಯೋ ತನ್ನ ಏರ್ಫೈಬರ್ ಸೇವೆ ಆರಂಭಿಸಿದೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆಗಳಲ್ಲಿ ಸದ್ಯಕ್ಕೆ ಜಿಯೋ ಏರ್ಫೈಬರ್ ಲಭ್ಯ ಇದೆ. ತಿಂಗಳಿಗೆ 599 ರೂನಿಂದ ಪ್ರಾರಂಭವಾಗಿ 3,999 ರೂವರೆಗೂ ವಿವಿಧ ಪ್ಲಾನ್ಗಳನ್ನು ಜಿಯೋ ಏರ್ಫೈಬರ್ನಲ್ಲಿ ಆಫರ್ ಮಾಡಲಾಗಿದೆ. ಜಿಯೋಫೈಬರ್ನಲ್ಲಿ ಲಭ್ಯ ಇರುವ ಬಹುತೇಕ ಫೀಚರ್ಗಳು ಏರ್ಫೈಬರ್ನಲ್ಲೂ ಸಿಗುತ್ತವೆ. ಒಂದು ಜಿಬಿವರೆಗೂ ಭರಪೂರ ಇಂಟರ್ನೆಟ್ ವೇಗ ಸಿಗುತ್ತದೆ.
ಏನಿದು ಏರ್ಫೈಬರ್?
ಇದು ವೈರ್ಲೆಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ. ಗಾಳಿ ಮೂಲಕ ಇಂಟರ್ನೆಟ್ ಕನೆಕ್ಟಿವಿಟಿ ಪಡೆಯಬಹುದು. ಫೈಬರ್ ಬ್ರಾಡ್ಬ್ಯಾಂಡ್ನನಷ್ಟೇ ವೇಗದ ಇಂಟರ್ನೆಟ್ ಅನ್ನು ಏರ್ಫೈಬರ್ನಲ್ಲೂ ಪಡೆಯಬಹುದು. 1 ಜಿಬಿಯವರೆಗಿನ ಇಂಟರ್ನೆಟ್ ವೇಗ ಇರುತ್ತದೆ.
ಫೈಬರ್ ಬ್ರಾಡ್ಬ್ಯಾಂಡ್ ಕೇಬಲ್ ಅನ್ನು ಎಳೆಸಲು ಕಷ್ಟವಾಗುವುದಿದ್ದರೆ ಏರ್ಫೈಬರ್ ಪರ್ಯಾಯ ಆಯ್ಕೆಯಾಗಿರುತ್ತದೆ.
ಜಿಯೋ ಏರ್ಫೈಬರ್ ಪ್ಲಾನ್ಗಳ ಬೆಲೆ ಎಷ್ಟು?
ಜಿಯೋ ಏರ್ಫೈಬರ್ನಲ್ಲಿ ಉತ್ತಮ ಇಂಟರ್ನೆಟ್ ಸ್ಪೀಡ್ ಜೊತೆಗೆ 550ಕ್ಕೂ ಹೆಚ್ಚು ಡಿಜಿಟಲ್ ಚಾನಲ್ಸ್, 14ಕ್ಕೂ ಹೆಚ್ಚು ಒಟಿಟಿ ಆ್ಯಪ್ಗಳು ಸಿಗುತ್ತವೆ. ಇದರ ಪ್ಲಾನ್ಗಳು 599 ರೂನಿಂದ ಆರಂಭವಾಗುತ್ತದೆ. ಇದಕ್ಕೆ 30 ಎಂಬಿಪಿಎಸ್ ಸ್ಪೀಡ್ನ ಇಂಟರ್ನೆಟ್ ಕನೆಕ್ಷನ್ ಸಿಗುತ್ತದೆ. 3,000 ರೂ ಪ್ಲಾನ್ನಲ್ಲಿ 1 ಜಿಬಿಪಿಎಸ್ ಸ್ಪೀಡ್ ಸಿಗುತ್ತದೆ.
599 ರೂ ಪ್ಲಾನ್: 30 ಎಂಬಿಪಿಎಸ್ ಇಂಟರ್ನೆಟ್
899 ರೂ ಪ್ಲಾನ್: 100 ಎಂಬಿಪಿಎಸ್ ಇಂಟರ್ನೆಟ್
1,199 ರೂ ಪ್ಲಾನ್: 100 ಎಂಬಿಪಿಎಸ್ ಇಂಟರ್ನೆಟ್
1,499 ರೂ ಪ್ಲಾನ್: 300 ಎಂಬಿಪಿಎಸ್ ಸ್ಪೀಡ್
2,499 ರೂ ಪ್ಲಾನ್: 300 ಎಂಬಿಪಿಎಸ್ ಸ್ಪೀಡ್
3,999 ರೂ ಪ್ಲಾನ್: 1,000 ಎಂಬಿಪಿಎಸ್ ಸ್ಪೀಡ್
ಇನ್ನೊಂದೆಡೆ, ಜಿಯೋ ಫೈಬರ್ ಪ್ಲಾನ್ಗಳು 399 ರೂನಿಂದ ಆರಂಭವಾಗಿ 3,999 ರೂವರೆಗೂ ಇವೆ. ಜಿಯೋ ಏರ್ಫೈಬರ್ ಕನೆಕ್ಷನ್ ಪಡೆಯಬೇಕೆನ್ನುವವರು 60008-60008 ನಂಬರ್ಗೆ ವಾಟ್ಸಾಪ್ ಮೂಲಕ ಮಿಸ್ಡ್ ಕಾಲ್ ಕೊಡಬಹುದು. ಜಿಯೋ ವೆಬ್ಸೈಟ್ ಅಥವಾ ಜಿಯೋ ಸ್ಟೋರ್ಗೆ ಹೋಗಿಯೂ ಈ ಸೇವೆ ಪಡೆಯಬಹುದು.