8 ನಗರಗಳಲ್ಲಿ ಜಿಯೋ ಏರ್​ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್​ಗಳ ಬೆಲೆ

ಶೇರ್ ಮಾಡಿ

ರಿಲಾಯನ್ಸ್ ಜಿಯೋ ಸಂಸ್ಥೆ ಗಣೇಶ ಚತುರ್ಥಿ ದಿನದಂದು ಜಿಯೋ ಏರ್​ಫೈಬರ್ ಸೇವೆಯನ್ನು ಅನಾವರಣಗೊಳಿಸಿದೆ. ಸದ್ಯ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಜಿಯೋ ತನ್ನ ಏರ್​ಫೈಬರ್ ಸೇವೆ ಆರಂಭಿಸಿದೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆಗಳಲ್ಲಿ ಸದ್ಯಕ್ಕೆ ಜಿಯೋ ಏರ್​ಫೈಬರ್ ಲಭ್ಯ ಇದೆ. ತಿಂಗಳಿಗೆ 599 ರೂನಿಂದ ಪ್ರಾರಂಭವಾಗಿ 3,999 ರೂವರೆಗೂ ವಿವಿಧ ಪ್ಲಾನ್​ಗಳನ್ನು ಜಿಯೋ ಏರ್​ಫೈಬರ್​ನಲ್ಲಿ ಆಫರ್ ಮಾಡಲಾಗಿದೆ. ಜಿಯೋಫೈಬರ್​ನಲ್ಲಿ ಲಭ್ಯ ಇರುವ ಬಹುತೇಕ ಫೀಚರ್​ಗಳು ಏರ್​ಫೈಬರ್​ನಲ್ಲೂ ಸಿಗುತ್ತವೆ. ಒಂದು ಜಿಬಿವರೆಗೂ ಭರಪೂರ ಇಂಟರ್ನೆಟ್ ವೇಗ ಸಿಗುತ್ತದೆ.

ಏನಿದು ಏರ್​ಫೈಬರ್?
ಇದು ವೈರ್ಲೆಸ್ ಬ್ರಾಡ್​ಬ್ಯಾಂಡ್ ಇಂಟರ್ನೆಟ್ ಸೇವೆ. ಗಾಳಿ ಮೂಲಕ ಇಂಟರ್ನೆಟ್ ಕನೆಕ್ಟಿವಿಟಿ ಪಡೆಯಬಹುದು. ಫೈಬರ್ ಬ್ರಾಡ್​ಬ್ಯಾಂಡ್​ನನಷ್ಟೇ ವೇಗದ ಇಂಟರ್ನೆಟ್ ಅನ್ನು ಏರ್​ಫೈಬರ್​ನಲ್ಲೂ ಪಡೆಯಬಹುದು.​ 1 ಜಿಬಿಯವರೆಗಿನ ಇಂಟರ್ನೆಟ್ ವೇಗ ಇರುತ್ತದೆ.

ಫೈಬರ್ ಬ್ರಾಡ್​ಬ್ಯಾಂಡ್ ಕೇಬಲ್ ಅನ್ನು ಎಳೆಸಲು ಕಷ್ಟವಾಗುವುದಿದ್ದರೆ ಏರ್​ಫೈಬರ್ ಪರ್ಯಾಯ ಆಯ್ಕೆಯಾಗಿರುತ್ತದೆ.

ಜಿಯೋ ಏರ್​ಫೈಬರ್ ಪ್ಲಾನ್​ಗಳ ಬೆಲೆ ಎಷ್ಟು?
ಜಿಯೋ ಏರ್​ಫೈಬರ್​ನಲ್ಲಿ ಉತ್ತಮ ಇಂಟರ್ನೆಟ್ ಸ್ಪೀಡ್ ಜೊತೆಗೆ 550ಕ್ಕೂ ಹೆಚ್ಚು ಡಿಜಿಟಲ್ ಚಾನಲ್ಸ್, 14ಕ್ಕೂ ಹೆಚ್ಚು ಒಟಿಟಿ ಆ್ಯಪ್​ಗಳು ಸಿಗುತ್ತವೆ. ಇದರ ಪ್ಲಾನ್​ಗಳು 599 ರೂನಿಂದ ಆರಂಭವಾಗುತ್ತದೆ. ಇದಕ್ಕೆ 30 ಎಂಬಿಪಿಎಸ್ ಸ್ಪೀಡ್​ನ ಇಂಟರ್ನೆಟ್ ಕನೆಕ್ಷನ್ ಸಿಗುತ್ತದೆ. 3,000 ರೂ ಪ್ಲಾನ್​ನಲ್ಲಿ 1 ಜಿಬಿಪಿಎಸ್ ಸ್ಪೀಡ್ ಸಿಗುತ್ತದೆ.

599 ರೂ ಪ್ಲಾನ್: 30 ಎಂಬಿಪಿಎಸ್ ಇಂಟರ್ನೆಟ್
899 ರೂ ಪ್ಲಾನ್: 100 ಎಂಬಿಪಿಎಸ್ ಇಂಟರ್ನೆಟ್
1,199 ರೂ ಪ್ಲಾನ್: 100 ಎಂಬಿಪಿಎಸ್ ಇಂಟರ್ನೆಟ್
1,499 ರೂ ಪ್ಲಾನ್: 300 ಎಂಬಿಪಿಎಸ್ ಸ್ಪೀಡ್
2,499 ರೂ ಪ್ಲಾನ್: 300 ಎಂಬಿಪಿಎಸ್ ಸ್ಪೀಡ್
3,999 ರೂ ಪ್ಲಾನ್: 1,000 ಎಂಬಿಪಿಎಸ್ ಸ್ಪೀಡ್

ಇನ್ನೊಂದೆಡೆ, ಜಿಯೋ ಫೈಬರ್ ಪ್ಲಾನ್​ಗಳು 399 ರೂನಿಂದ ಆರಂಭವಾಗಿ 3,999 ರೂವರೆಗೂ ಇವೆ. ಜಿಯೋ ಏರ್​ಫೈಬರ್ ಕನೆಕ್ಷನ್ ಪಡೆಯಬೇಕೆನ್ನುವವರು 60008-60008 ನಂಬರ್​ಗೆ ವಾಟ್ಸಾಪ್ ಮೂಲಕ ಮಿಸ್ಡ್ ಕಾಲ್ ಕೊಡಬಹುದು. ಜಿಯೋ ವೆಬ್​ಸೈಟ್ ಅಥವಾ ಜಿಯೋ ಸ್ಟೋರ್​ಗೆ ಹೋಗಿಯೂ ಈ ಸೇವೆ ಪಡೆಯಬಹುದು.

Leave a Reply

error: Content is protected !!