ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾದ ನಂಜಪ್ಪ ನಿಧನ

ಶೇರ್ ಮಾಡಿ

ಕುಂದಾಪುರ: ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರಾದ ನಂಜಪ್ಪ (59) ಬುಧವಾರ ತಡರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಹಠಾತ್ ಅನಾರೋಗ್ಯದಿಂದ ಬಳಲಿದ ಅವರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಲಿವರ್ ಸಂಬಂಧಿತ ಗಂಭೀರ ಸಮಸ್ಯೆ ಕಂಡುಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ನಂಜಪ್ಪ ಅವರು ಕಳೆದ ಒಂದು ವರ್ಷದಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕರ್ತವ್ಯ ನಿಷ್ಠೆ, ಶಿಸ್ತಿನ ಕಾರ್ಯಪದ್ಧತಿ, ಹಾಗೂ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯು ಅವರಿಗೆ ವಿಶೇಷ ಗೌರವ ನೀಡಿತ್ತು. ಮೂಲತಃ ಭದ್ರಾವತಿಯವರಾದ ಅವರು, ಖ್ಯಾತ ಪವರ್ ಲಿಪ್ಟರ್ ಆಗಿಯೂ ಹೆಸರು ಮಾಡಿದ್ದರು. ಪೊಲೀಸ್ ಸೇವೆಗೆ ಜೊತೆಯಾಗಿ ಕ್ರೀಡಾಕ್ಷೇತ್ರದಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.

ಬೆಳಗ್ಗೆ 10.15 ಗಂಟೆಗೆ ಕುಂದಾಪುರ ಠಾಣೆಯಲ್ಲಿ ಸಾರ್ವಜನಿಕ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ನಂತರ ಹುಟ್ಟೂರಾದ ಭದ್ರಾವತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ಅವರ ಅಕಾಲಿಕ ನಿಧನದಿಂದ ಪೊಲೀಸ್ ಇಲಾಖೆಯು ಒಬ್ಬ ಶಿಸ್ತುಬದ್ಧ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ.

ಹೆದ್ದಾರಿ ಬದಿಯ ಮನೆಯ ಗೇಟು ಬಳಿ ಕಾಡಾನೆಗಳು ನಿಂತು ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದು, ಈ ವೇಳೆ ವಾಹನಗಳು ಸಂಚರಿಸುತ್ತಿರುವ ದೃಶ್ಯಗಳು ದೃಢವಾದ ಸಾಕ್ಷ್ಯವಾಗಿವೆ. ಈ ಪ್ರದೇಶದಲ್ಲಿ ಈ ಮೊದಲು ಕೂಡ ಕಾಡಾನೆಗಳ ಅಟ್ಟಹಾಸ ಕಂಡು ಬಂದಿದ್ದು, ಕೃಷಿ ತೋಟಗಳಿಗೆ ಹಾನಿಯೂ ಉಂಟಾಗಿದೆ.

ಸ್ಥಳೀಯ ಕೃಷ್ಣ ಮುರಾರಿ ಅವರು, “ಇಷ್ಟು ದಿನಕ್ಕೂ ಯಾವುದೇ ನಿರ್ದಿಷ್ಟ ಕಾರ್ಯಾಚರಣೆ ಫಲ ನೀಡಿಲ್ಲ. ಕಾಡಾನೆಗಳು ಆಗ ಬಂದು ಹಾನಿ ಮಾಡುತ್ತವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆರ್ನಾಜೆಯ ಕುಮಾರ್ ಅವರೂ, “ಇಲ್ಲಿಯ ಜೀವನದ ಅವಿಭಾಜ್ಯ ಭಾಗವೇ ಈಗ ಕಾಡಾನೆ ಭಯ. ನಿತ್ಯವೂ ಎಲ್ಲಿ ಕಾಡಾನೆ ಬರುತ್ತದೆ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ” ಎಂದು ದುಃಖಿಸಿದರು.

ಈ ಹಿಂದೆ ಎಪ್ರಿಲ್ 29ರಂದು ಅರ್ತ್ಯಡ್ಕದಲ್ಲಿ ಕಾಡಾನೆಯೊಂದು ಮಹಿಳೆಯನ್ನು ಕೊಂದು ಹಾಕಿದ್ದ ಹಿನ್ನಲೆಯಲ್ಲಿ, ಚಿಕ್ಕಮಗಳೂರಿನಿಂದ ಇಟಿಎಫ್‌ (ಎಲಿಫೆಂಟ್ ಟ್ಯಾಸ್ಕ್ ಫೋರ್ಸ್) ತಂಡವನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮೇ 5 ರಿಂದ ಕಾರ್ಯಾರಂಭಿಸಿ, ಇತ್ತೀಚೆಗೆ ಅದು ಅಂತ್ಯಗೊಂಡಿತ್ತು. ಆದರೆ ಅದರ ಬೆನ್ನಲ್ಲೇ ಮತ್ತೆ ಕಾಡಾನೆಗಳು ಆನೆಗುಂಡಿ ಪರಿಸರದಲ್ಲಿ ಕಾಣಿಸಿಕೊಂಡಿರುವುದು ಹಲವರಿಗೆ ಅಚ್ಚರಿ ತಂದಿದೆ.

ಇಟಿಎಫ್‌ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯು ಈಗ ಕಾಡಾನೆಗಳನ್ನು ಕನಕಮಜಲು ಅರಣ್ಯ ಭಾಗ ಅಥವಾ ಕೇರಳದ ಅರಣ್ಯ ಪ್ರದೇಶಕ್ಕೆ ತಿರುಗಿಸೋಲುವ ಪ್ರಯತ್ನದಲ್ಲಿದೆ. ಆದರೆ ಇಂತಹ ಕಾರ್ಯಾಚರಣೆಗಳು ಯಶಸ್ವಿಯಾಗದೇ ಇದ್ದರೆ, ಹತ್ತಿರದ ಗ್ರಾಮಗಳಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಸ್ಥಳೀಯರು ಗಂಭೀರ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.

  •  

Leave a Reply

error: Content is protected !!